‘ಸುಮಲತಾರನ್ನು ಬೆಂಬಲಿಸಿದರೆ ಕೋಮುವಾದಿ ಬಿಜೆಪಿಯನ್ನು ಬೆಂಬಲಿಸಿದಂತೆ’ ; ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ,ಏ.13- ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದರೆ ಕೋಮುವಾದಿ ಬಿಜೆಪಿಯನ್ನು ಬೆಂಬಲಿಸಿದಂತೆ. ಆದ್ದರಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಸೋಲಿಸಿ ಎಂದು ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮುಯ್ಯ ಕರೆ ನೀಡಿದರು.

ಪಟ್ಟಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಹೋರಾಟ ಜÁತ್ಯತೀತ ತತ್ವಗಳಿಗೆ ಮಾತ್ರ ಕೋಮುವಾದಿಗಳಿಗೆ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ ಪಕ್ಷೇತರ ಅಭ್ಯರ್ಥಿಗೆ ಅಹಿಂದ ಮತಗಳು ಒಂದೂ ಬೀಳಬಾರದು ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರು, ಹಿಂದುಳಿದ ವರ್ಗದವರ ಪರವಾಗಿಲ್ಲ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಿಂದುಳಿವರಿಗೆ,ಅಲ್ಪಸಂಖ್ಯಾತರಿಗೆ ಒಂದೇ ಒಂದು ಸ್ಥಾನವನ್ನು ಕೊಟ್ಟಿಲ್ಲ, ಜೆಡಿಎಸ್ ಮೂರು ಕ್ಷೇತ್ರ ಹಾಗೂ ಕಾಂಗ್ರೇಸ್ ಐದು ಕ್ಷೇತ್ರಗಳಲ್ಲಿ ಹಿಂದುಳಿವರಿಗೆ,ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಬರಗಾಲವಿದೆ ಹಣಕೊಡಿ ಎಂದರೂ ಕೊಡಲಿಲ್ಲ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿ ಎಂದೆ, ಆಮನುಷ್ಯ ಕರುಣೆ ತೋರಲಿಲ್ಲ ನನ್ನದು 56ಇಂಚಿನ ಎದೆ ಎನ್ನತ್ತಾರೆ ಅದು ಪ್ರಯೋಜನವಿಲ್ಲ ಬಡವರು ರೈತರ ಪರವಾದ ಹೃದಯ ವಿರಬೇಕು ಎಂದು ಪ್ರಧಾನಿ ಮೋದಿಯನ್ನು ಚುಚ್ಚಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರುದ್ದ ದೇವೇಗೌಡರು ಉಪವಾಸ ಕುಳಿತರು. ಕೊನೆಗೆ ಕೇಂದ್ರದ ಭರವಸೆ ದೊರೆತ ಬಳಿಕ ವಾಪಸ್ ಪಡೆದುಕೊಂಡರು. ಮತದಾರರು ಬಡವರು ರೈತರ ಪರವಾಗಿರುವವರನ್ನು ಬೆಂಬಲಿಸಬೇಕು ಢೋಂಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಡಿ ಎಂದರು.

ಶಾಸಕ ಡಾ.ಕೆ.ಅನ್ನದಾನಿ,ಸಿ,ಎಂ ಇಬ್ರಾಹಿಂ,ವಿಧಾನಪರಿಷತ್ತು ಸದಸ್ಯ ಮರಿತಿಬ್ಬೇಗೌಡ,ಸಚಿವ ಪುಟ್ಟರಾಜು,ಶಿವಣ್ಣ,ಜೆಡಿಎಸ್ ಹಿಂದುಳಿದ ವರ್ಗದ ಅಧ್ಯಕ್ಷ ಡಿ,ಜಯರಾಮು,ಡಾಬಾ ಸೋಮಣ್ಣ, ತಾ.ಅಧ್ಯಕ್ಷ ರವಿ(ಕಂಸಾಗರ),ಮುಂತಾದವರು ಪಾಲ್ಗೊಂಡಿದರು,

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin