ಸುರಂಗ ಕೊರೆದು ಚಿನ್ನದಂಗಡಿ ಕಳುವಿಗೆ ಯತ್ನ ಪೊಲೀಸರ ಮೇಲೆ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ramanagara-3

ರಾಮನಗರ, ಆ.18- ಚಿನ್ನದಂಗಡಿ ದೋಚಲು ಬಂದ ರಾಜಸ್ತಾನ ಮೂಲದ 7 ದರೋಡೆಕೋರರು ತಮ್ಮನ್ನು ಹಿಡಿಯಲು ಬಂದ ಪೊ ಲೀಸರ ಮೇಲೆ ಹಲ್ಲೆ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ತಡರಾತ್ರಿ ನಗರದ ಎಂ.ಜಿ.ರಸ್ತೆಯಲ್ಲಿ ನಡೆದಿದೆ.ಏಳು ಮಂದಿ ದರೋಡೆಕೋರರ ಪೈಕಿ ರಾಜು (32) ಎಂಬ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ರಾಮನಗರ ಟೌನ್ ಪೊ ಲೀಸರು ಯಶಸ್ವಿಯಾಗಿದ್ದು, ಉಳಿದ 6 ಮಂದಿ ಆರೋಪಿಗಳ ಬಂಧನಕ್ಕೆ ಜಿಲ್ಲೆಯಾದ್ಯಂತ ನಾಕಾ ಬಂದಿ ಹಿಡಿಸಿದ್ದಾರೆ.ಎಂ.ಜಿ.ರಸ್ತೆಯಲ್ಲಿರುವ ಎಸ್.ಪಿ. ಜ್ಯುವೆಲರೀಸ್ ಮಳಿಗೆಗೆ ತಡರಾತ್ರಿ ರಾಜಸ್ತಾನ ಮೂಲದ ದರೋಡೆಕೋರರು ಸುರಂಗ ಕೊರೆದು ಚಿನ್ನಾಭರಣ ದೋಚಲು ಯತ್ನಿಸುತ್ತಿದ್ದರು.ದರೋಡೆಕೋರರ ವಾಸನೆ ಹಿಡಿದ ಪೊ ಲೀಸರು ಆರೋಪಿಗಳ ಬಂಧನಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಪೇದೆಗಳಾದ ಗೌರೀಶ್, ಬೆಟ್ಟಸ್ವಾಮಿ ಹಾಗೂ ಹೋಂ ಗಾರ್ಡ್ ನರಸಿಂಹಮೂರ್ತಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು.
ಆದರೂ ಛಲ ಬಿಡದ ಪೊಲೀಸರು ಆರೋಪಿಗಳನ್ನು ಸುತ್ತುವರೆದಾಗ ಗಾಳಿಯಲ್ಲಿ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆಯಲ್ಲಿ ಹೋಂ ಗಾರ್ಡ್ ನರಸಿಂಹಮೂರ್ತಿ ತೀವ್ರವಾಗಿ ಗಾಯಗೊಂಡಿದ್ದು, ಪೇದೆಗಳಾದ ಗೌರೀಶ್ ಮತ್ತು ಬೆಟ್ಟಸ್ವಾಮಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಟೌನ್ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದು, ಜಿಲ್ಲೆಯಾದ್ಯಂತ ನಾಕಾಬಂಧಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 

► Follow us on –  Facebook / Twitter  / Google+

 

Facebook Comments

Sri Raghav

Admin