ಸುರಕ್ಷಿತ ಹೆರಿಗೆಗಾಗಿ ಕಬ್ಬಿಣಾಂಶ ಮಾತ್ರೆ ಒಳಿತು

ಈ ಸುದ್ದಿಯನ್ನು ಶೇರ್ ಮಾಡಿ

Huliyar

ಹುಳಿಯಾರು,ಆ.10-ಸುರಕ್ಷಿತ ಹೆರಿಗೆಗಾಗಿ ಗರ್ಭಿಣಿಯರು ಕನಿಷ್ಠ 100 ಕಬ್ಬಿಣಾಂಶ ಮಾತ್ರೆಗಳನ್ನು ತೆಗೆದುಕೊಳ್ಳಬೇಕು, ಜೊತೆಗೆ ಬಸಳೆಸೊಪ್ಪು, ಪಾಲಕ್ ಸೊಪ್ಪು, ಕೆಂಪಕ್ಕಿ, ಮೊಳಕೆಕಾಳು ಸೇವಿಸಬೇಕೆಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ಆಯುಷ್ ವೈದ್ಯರಾದ ಡಾ.ಚಂದನ ತಿಳಿಸಿದರು.ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಕಬ್ಬಿಣಾಂಶ ಮಾತ್ರೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಕೊಡುವ ಕಬ್ಬಿಣಾಂಶ ಮಾತ್ರೆಗಳಾದ ಫೋಲಿಕ್  ಆಸಿಡ್ ಮಾತ್ರಗಳನ್ನು ನುಂಗುವುದು ಒಳಿತು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಶೋಭ, ಹಿರಿಯ ಆರೋಗ್ಯ ಸಹಾಯಕರಾದ ವೆಂಕಟರಮಯ್ಯ, ಆರೋಗ್ಯ ಸಿಬ್ಬಂಧಿಗಳಾದ ನಾಗವೇಣಿ, ಜ್ಯೋತಿಕಲಾ, ನಾಗಮ್ಮ, ರಶ್ಮಿ, ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಮಂಜಮ್ಮ, ಪದ್ಮಾ, ಅಭಿದಾಭಿ, ಮಹಬೂಬ್ ಜಾನ್, ಅಂಜನಮ್ಮ ಮತ್ತಿತರರು ಇದ್ದರು.

Facebook Comments

Sri Raghav

Admin