ಸುಳ್ಳು ಕೇಸು : ಅಧಿಕಾರಿಗಳ ಕ್ರಮ ಪ್ರಶ್ನಿಸಿ ನಿರ್ದೇಶಕರ ಸಾಮೂಹಿಕ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ,ಫೆ.3-ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಹಾಗೂ ಮೇಲ್ವಿಚಾರಕರು ಭಾರಿ ಅವ್ಯವಹಾರ ನಡೆಸಿರುವ ಕುರಿತು ಮೇಲಾಧಿಕಾರಿಗಳಿಗೆ ಹಲವಾರು ಭಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ದೂರು ನೀಡಿದ ನಿರ್ದೇಶಕರ ಮೇಲೆಯೇ ಸುಳ್ಳು ಕೇಸು ದಾಖಲಿಸಿ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿರುವ ಕ್ರಮ ಖಂಡಿಸಿ ಸಹಕಾರ ಸಂಘದ ನಿರ್ದೇಶಕರು ಸಾಮೂಹಿಕ ರಾಜೀನಾಮೆ ನೀಡಿರುವ ಪ್ರಸಂಗ ವರದಿಯಾಗಿದೆ. ತಾಲ್ಲೂಕಿನ ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು ಸಂಘದ ಕಾರ್ಯದರ್ಶಿ ಹಾಗೂ ಮೇಲ್ವಿಚಾರಕರು ಸರ್ಕಾರದ ವಿವಿಧ ರೈತ ಯೋಜನೆಗಳಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂ ಅವ್ಯವಹಾರ ನಡೆಸಿದ್ದಾರೆ ಎಂದು ನಿರ್ದೇಶಕರುಗಳು ಆರೋಪಿಸಿದ್ದಾರೆ.

ಈ ಬಗ್ಗೆ ಹಲವಾರು ಭಾರಿ ಸಹಕಾರ ಸಂಘಗಳ ಜಿಲ್ಲಾ ಸಹಾಯಕ ನಿಬಂಧಕರು ಹಾಗೂ ಸಹಾಯಕ ಉಪ ನಿಬಂಧಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅವ್ಯವಹಾರ ನಡೆಸಿದ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಮೇಲ್ವಿಚಾರಕರ ವಿರುದ್ದ ಕ್ರಮ ಕೈಗೊಳ್ಳುವ ಬದಲಾಗಿ ದೂರು ನೀಡಿದ ನಿರ್ಧೇಕರ ವಿರುದ್ದವೇ ಸದರಿ ಕಾರ್ಯದರ್ಶಿ ಬೇರೆಯವರ ಕಡೆಯಿಂದ ಸುಳ್ಳು ಕೇಸು ಹಾಕಿಸಿ ನಿರ್ದೇಶಕ ಸ್ಥಾನದಿಂದಲೇ ವಜಾಗೊಳ್ಳುವಂತೆ ಮಾಡಿರುವು ಇವರ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ದೂರಿದ್ದಾರೆ. ಚುನಾಯಿತ ಪ್ರತಿನಿಧಿಗಳಾದ ನಮ್ಮ ಮನವಿಗೆ ಯಾವುದೇ ಬೆಲೆ ಇಲ್ಲ ಎಂದಮೇಲೆ ಆ ಸ್ಥಾನದಲ್ಲಿ ಮುಂದುವರಿಯುವಲ್ಲಿ ಅರ್ಥವಿಲ್ಲ ಎಂದು ಭಾವಿಸಿ ಸದರಿ ಸಹಕಾರ ಸಂಘದ ನಿರ್ದೇಶಕರಾದ ಬಸವರಾಜು, ಗಿರಿಗೌಡ, ಸಿದ್ದರಾಜು ಹಾಗೂ ಪುಟ್ಟರತ್ಮಮ್ಮಣಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin