ಸುವರ್ಣ ಸೌಧದ ಪಕ್ಕದಲ್ಲಿಯೇ ಶಾಸಕರ ಭವನ ನಿರ್ಮಿಸಲು ‘ಪ್ಲ್ಯಾನ್’

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha-01

ಬೆಳಗಾವಿ, ನ.21- ಅಧಿವೇಶನ ಹಾಗೂ ಇತರ ಸಂದರ್ಭದಲ್ಲಿ ಶಾಸಕರಿಗೆ ಇಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣಕ್ಕೆ ಸುವರ್ಣ ಸೌಧದ ಪಕ್ಕದಲ್ಲಿಯೇ ಶಾಸಕರ ಭವನ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. 25 ಎಕರೆ ವಿಸ್ತೀರ್ಣದ ಸುವರ್ಣ ಸೌಧದ ಬಲಭಾಗದಲ್ಲಿ ನಾಲ್ಕು ಬ್ಲಾಕ್‍ಗಳ ಶಾಸಕರ ಭವನ ನಿರ್ಮಿಸಲು ನೀಲಿನಕ್ಷೆ ರೆಡಿಯಾಗುತ್ತಿದೆ. ಅಷ್ಟೇ ಅಲ್ಲ, ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗ್ತಿರುವ ಶಾಸಕರ ಭವನದಲ್ಲಿ ಶಾಸಕರು ಯಾವಾಗಲೂ ಉಳಿದುಕೊಳ್ಳೋದಿಲ್ಲ. ಹೀಗಾಗಿ ಇದರ ನಿರ್ವಹಣೆ ಖಾಸಗಿಯವರಿಗೆ ನೀಡಲೂ ಸರ್ಕಾರ ಚಿಂತನೆ ನಡೆಸಿದೆ.

ಸರ್ಕಾರದ ಮೂಲಗಳ ಪ್ರಕಾರ ಈಗಾಗಲೇ ಬೆಳಗಾವಿಯ ಖಾಸಗಿ ಹೋಟೆಲ್ ಮಾಲೀಕರೊಬ್ಬರು ಸರ್ಕಾರದ ಜೊತೆ ಮಾತುಕತೆ ಕೂಡ ನಡೆಸಿದ್ದಾರಂತೆ.. ಇಡೀ ವರ್ಷ ಹೋಟೆಲ್ ನಡೆಸಲು ಅನುಮತಿ ನೀಡಬೇಕು. ಅಧಿವೇಶನ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಮಹಾರಾಷ್ಟ್ರದ ನಾಗಪುರದಲ್ಲಿ ಇದೇ ರೀತಿಯ ಹೋಟೆಲ್ ನಡೀತಿದೆ.. ಅದೇ ರೀತಿ ಬೆಳಗಾವಿಯಲ್ಲೂ ಶಾಸಕರ ಭವನ ನಡೆಸಲು ಅವಕಾಶ ನೀಡಿದರೆ, ಸರ್ಕಾರಕ್ಕೆ ಆದಾಯ ಬರುವ ಕುರಿತೂ ಲೆಕ್ಕಾಚಾರ ನಡೆಯುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin