ಸುಸ್ಥಿರ ಕೃಷಿ ಸಂಶೋಧನೆಗೆ ಪ್ರಧಾನಿ ಮೋದಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Modi-002

ನವದೆಹಲಿ, ನ.6-ಜಾಗತಿಕ ಆಹಾರ, ಪೌಷ್ಟಿಕಾಂಶ ಮತ್ತು ಪರಿಸರ ಭದ್ರತೆಯನ್ನು ದೃಢಪಡಿ ಸಲು ತುಂಬಾ ಪ್ರಮುಖವಾದ ಕೃಷಿ ಜೀವವೈ ವಿಧ್ಯತೆಯನ್ನು ಸುಸ್ಥಿರಗೊಳಿಸುವ ಮಹತ್ವದ ಸಂಶೋಧನೆ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಿರಂತರ ಕೃಷಿ ಉತ್ಪಾದನೆಗೆ ಪೂರಕವಾದ ಸಂಶೋಧನೆ ಮತ್ತು ಅನ್ವೇಷಣೆಗಳನ್ನು ನಡೆಸುವಂತೆಯೂ ಅವರು ವಿಶ್ವದ ಕೃಷಿ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಕರೆ ನೀಡಿದ್ದಾರೆ. ರಾಜಧಾನಿಯಲ್ಲಿ ಇಂದು ನಡೆದ ಪ್ರಪ್ರಥಮ ಅಂತಾರಾಷ್ಟ್ರೀಯ ಕೃಷಿ-ಜೀವ ವೈವಿಧ್ಯತೆ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಪ್ರಧಾನಿ ಮಾತನಾಡಿದರು. ಕೃಷಿ ಜೀವವೈವಿಧ್ಯತೆ ಸಮರ್ಪಕ ನಿರ್ವಹಣೆಗೆ ಅವರು ಕರೆ ನೀಡಿದರು.

ಕೃಷಿ ಜೈವಿಧ್ಯತೆ ಮತ್ತು ವಂಶವಾಹಿ ಸಂಪನ್ಮೂಲಗಳ ಸಂರಕ್ಷಣೆಗಾಗಿ ವಿಜ್ಞಾನಿಗಳು, ಕೃಷಿಕರು ಮತ್ತು ಇದಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಪ್ರಧಾನಿ ಸಲಹೆ ಮಾಡಿದರು. ವಿಶ್ವದಲ್ಲಿ ಏರುಗತಿಯಲ್ಲಿ ಏರುತ್ತಿರುವ ಜನಸಂಖ್ಯೆಗೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಒದಗಿಸಲು ಕೃಷಿ ಜೀವವೈವಿಧ್ಯತೆಯನ್ನು ನಿರಂತರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.  ವಾತಾವರಣ ಬದಲಾವಣೆ, ಹವಾಮಾನ ವೈಪರಿತ್ಯ ಇವುಗಳಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ಸವಾಲು ಎದುರಾಗಿದೆ. ಸುಸ್ಥಿತಿರ ಗತಿಯ ಕೃಷಿ ಉತ್ಪಾದನೆಯಿಂದ ಈ ಸಮಸ್ಯೆಯನ್ನು ನಿವಾರಿಸಬಹುದಾಗಿದೆ ಎಂದು ಪ್ರಧಾನಿ ಹೇಳಿದರು. ಸುಮಾರು 60 ರಾಷ್ಟಗಳ 900 ಪ್ರತಿನಿಧಿಗಳು ಅಂತಾರಾಷ್ಟ್ರೀಯ ಕೃಷಿ-ಜೀವ ವೈವಿಧ್ಯತೆ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin