ಸೂಕ್ತ ಚಿಕಿತ್ಸೆಗೆ ಕ್ಷಯ ಗುಣವಾಗುವುದು ನಿಶ್ಚಿತ

ಈ ಸುದ್ದಿಯನ್ನು ಶೇರ್ ಮಾಡಿ

dsgfgadsfggಕ್ಷಯ…. ಒಂದು ಕಾಲದಲ್ಲಿ ಈ ರೋಗದ ಹೆಸರು ಕೇಳಿದರೆ ಸಾಕು ಜನ ಬೆಚ್ಚಿಬೀಳುತ್ತ್ತಿದ್ದರು. ಆದರೆ, ಕಾಲ ಬದಲಾದಂತೆ ಮಾರಣಾಂತಿಕ ಎನಿಸಿಕೊಂಡಿದ್ದ ಈ ರೋಗಕ್ಕೂ ಮದ್ದು ಕಂಡು ಹಿಡಿದ ಪರಿಣಾಮ ಇಂದು ಕ್ಷಯ ಘಾತುಕವಲ್ಲ ಎನಿಸಿಕೊಂಡಿದೆ.  ಕ್ಷಯ ಎಂಬ ಮಹಾಮಾರಿ ಯಾವುದೇ ಪ್ರದೇಶ, ಅಥವಾ ದೇಶಕ್ಕೆ ಸಿಮೀತವಲ್ಲ. ಬಡವ, ಶ್ರೀಮಂತ ಎನ್ನದೆ ಎಲ್ಲರನ್ನೂ ಕಾಡುತ್ತದೆ. ವಿಶ್ವದಲ್ಲಿ ಪ್ರತಿವರ್ಷ ಒಂಬತ್ತು ಮಿಲಿಯನ್ ಜನ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮೇ 24 ರಂದು ವಿಶ್ವ ಕ್ಷಯ ದಿನಾಚರಣೆ ಆಚರಿಸಲಾಗುತ್ತಿದೆ.  ಟಿಬಿ ಎಂದೇ ಕರೆಯಲ್ಪಡುವ ಈ ರೋಗಕ್ಕೆ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರುವುದರಿಂದ ಪ್ರತಿವರ್ಷ ಈ ರೋಗಕ್ಕೆ ತುತ್ತಾಗುವ 9 ಮಿಲಿಯನ್ ರೋಗಿಗಳಲ್ಲಿ ಬಹುತೇಕ ಮಂದಿ ಸೂಕ್ತ ಕಾಲಕ್ಕೆ ಔಷಧಿ ಪಡೆದು ಗುಣಮುಖರಾಗುತ್ತಿದ್ದಾರೆ.

ಆದರೆ, ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಕಡುಬಡವರು, ನಿರಾಶ್ರಿತರು, ವಲಸಿಗರು, ಮಾದಕದ್ರವ್ಯ ವ್ಯಸನಿಗಳು, ಅದೆಷ್ಟೊ ಮಂದಿ ನಿರ್ಗತಿಕರು ಮಾತ್ರ ಈ ರೋಗದಿಂದ ಮುಕ್ತರಾಗದೆ ನರಳುತ್ತಿದ್ದಾರೆ.
ವಿಶ್ವ ಪಿಡುಗಾಗಿರುವ ಈ ರೋಗವನ್ನು ಬುಡಸಮೇತ ಕಿತ್ತುಹಾಕಲು ಪಣತೊಟ್ಟಿರುವ   ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಮೇ 24 ರಂದು ವಿಶ್ವ ಕ್ಷಯ ದಿನಾಚರಣೆ ಆಚರಿಸುತ್ತಿದೆ.
ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲು ಹಲವಾರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸರ್ಕಾರೇತರ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿವೆ. ಆದರೂ, ಈ ರೋಗವನ್ನು ತಡೆಗಟ್ಟಲು ಸಾಧ್ಯವಾಗದಿರುವುದು ಮಾತ್ರ ವಿಪರ್ಯಾಸವೇ ಸರಿ.
ಹೇಗಾ ದರೂ ಮಾಡಿ ಕ್ಷಯ ಮುಕ್ತ ಪ್ರಪಂಚ ನಿರ್ಮಿಸಲು ಪಣತೊಟ್ಟು ಕ್ಷಯ ದಿನಾಚರಣೆ ಆಚರಿಸುತ್ತ ಟಿಬಿ ರೋಗದ ಬಗ್ಗೆ ಅರಿವು ಮೂಡಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಯತ್ನಕ್ಕೆ ಯಶಸ್ಸು ಸಿಗಬೇಕಾದರೆ, ಸಮಾಜದ ಪ್ರತಿಯೊಬ್ಬ ನಾಗರಿಕರು ಹಾಗೂ ರಾಜಕಾರಣಿಗಳು ಈ ಕಾರ್ಯದಲ್ಲಿ ಕೈ ಜೋಡಿಸುವ ಅವಶ್ಯಕತೆ ಹೆಚ್ಚಾಗಿದೆ.  ತಮ್ಮ ಸಂಬಂಧಿಕರಲ್ಲಿ ಕ್ಷಯ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಪರೀಕ್ಷೆ ಮಾಡಿಸಿ ಲಭ್ಯವಿರುವ ಚಿಕಿತ್ಸೆ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯ.

ಸಾವಿನ ಪ್ರಮಾಣ ಇಳಿಕೆ:
ಕ್ಷಯ ರೋಗದ ಬಗ್ಗೆ  ತಿಳುವಳಿಕೆ ಮೂಡಿದ ನಂತರ ಆ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿರುವುದು ಸ್ವಾಗತಾರ್ಹವಾಗಿದೆ.  1990ರ ನಂತರ ಇಡೀ ವಿಶ್ವದಾದ್ಯಂತ ಕ್ಷಯ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಶೇ.45ರಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ಟಿಬಿ ರೋಗ ನಿವಾರಣೆಗೆ ಅನ್ವೇಷಿಸಲಾಗುತ್ತಿರುವ ಹೊಸ ಹೊಸ ಔಷಧಗಳು ಕಾರಣ ಎನ್ನುವುದು ಇಲ್ಲಿ ಉಲ್ಲೇಖಾರ್ಹ.  ಆದರೆ, ಈ ರೋಗದ ಬಗ್ಗೆ ಇನ್ನು ಅದೆಷ್ಟೋ ಮಂದಿಗೆ ನಿಖರವಾದ ಕಾರಣ ಮತ್ತು ಔಷದೋಪಚಾರಗಳ ಕುರಿತಂತೆ ಸಮರ್ಪಕ ಮಾಹಿತಿ ಇಲ್ಲದಿರುವುದರಿಂದ ಈ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ.
2012ರಲ್ಲಿ 8.6 ಮಿಲಿಯನ್ ಮಂದಿ ಕ್ಷಯ ರೋಗಕ್ಕೆ ತುತ್ತಾಗಿದ್ದರು ಎಂದು ಅಂದಾಜಿಸಲಾಗಿದೆ. ಇವರಲ್ಲಿ 1.3 ಮಿಲಿಯನ್ ಮಂದಿ ಈ ರೋಗಕ್ಕೆ ಬಲಿಯಾಗಿರುವುದು ದುರ್ದೈವವಾಗಿದೆ.  ಸವಾಲುಗಳು: ಕ್ಷಯ ರೋಗಕ್ಕೆ ತುತ್ತಾದ ರೋಗಿಗಳು ಸರಿಯಾದ ಕಾಲಕ್ಕೆ ರೋಗದ ಬಗ್ಗೆ ಪರೀಕ್ಷೆ ನಡೆಸಿಕೊಳ್ಳುವುದಿಲ್ಲ. ರೋಗದ ಪತ್ತೆಗೆ ಇಂದು  ಹಲವಾರು ಅಧುನಿಕ ವಿಧಿ ವಿಧಾನಗಳಿದ್ದರೂ ಅದರ ಬಗ್ಗೆ ಅರಿವಿಲ್ಲದಿರುವುದು ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳಲು ಕಾರಣವಾಗಿದೆ.  ವಿಶ್ವ ಪಿಡುಗಾಗಿರುವ ಈ ರೋಗದಿಂದ ಬಳಲುವ ವ್ಯಕ್ತಿ ಹೆಚ್‍ಐವಿ ಸೋಂಕಿಗೆ ಸಿಲುಕುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಟಿಬಿಯನ್ನು ಕಿತ್ತೊಗೆಯಲು ಇರುವ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರು ಸನ್ನದ್ಧರಾಗುವ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎನ್ನುವುದೇ ಈ ಲೇಖನದ ಉದ್ದೇಶ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin