ಸೆಂಟಿಮೆಂಟ್ ಗಾಗಿ ನಿರುಪಯುಕ್ತ ವಸ್ತುಗಳನ್ನು ತಮ್ಮ ಬಳಿಯಿಟ್ಟುಕೊಳ್ಳುವ ಭಾರತೀಯರು

ಈ ಸುದ್ದಿಯನ್ನು ಶೇರ್ ಮಾಡಿ

shetty

ನವದೆಹಲಿ, ಆ.10-ಭಾರತೀಯರು ಕೆಲವೊಂದು ವಸ್ತುಗಳ ಮೇಲೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೀಗಾಗಿ ಅವುಗಳ ಅಗತ್ಯವಿಲ್ಲದಿದ್ದರೂ ಮಾರಾಟ ಮಾಡಲು ಮುಂದಾಗುವುದಿಲ್ಲ. ಹೀಗೆ ಭಾರತದಲ್ಲಿ ಬಳಸಬಹುದಾದ ವಸ್ತುಗಳು ನಿರುಪಯುಕ್ತವಾಗಿ ಇರುವುದರ ಮೌಲ್ಯವೇ 78,300 ಕೋಟಿ ರೂ. ಗಳೆಂದು ಅಂದಾಜಿಸಲಾಗಿದೆ. ಆನ್‍ಲೈನ್ ಮಾರಾಟ ಸಂಸ್ಥೆ   ಈ ಕುರಿತು ದೇಶದ 16 ಪ್ರಮುಖ ನಗರಗಳಲ್ಲಿ ಸಮೀಕ್ಷೆ ನಡೆಸಿದ್ದು, ಈ ವೇಳೆ ಮಾಹಿತಿ ಬಹಿರಂಗವಾಗಿದೆ. ಅಲ್ಲದೇ ಇಂತಹ ವಸ್ತುಗಳನ್ನಿರಿಸಲು ತಮ್ಮ ಮನೆಯಲ್ಲಿ ವೃಥಾ ಸ್ಥಳವನ್ನು ಬಳಸಿಕೊಂಡಿರುವುದು ಕಂಡು ಬಂದಿದೆ.  ಹೀಗಾಗಿ ಜನತೆ, ತಮಗೆ ಬೇಕಿಲ್ಲದ ವಸ್ತುಗಳನ್ನು ಮಾರಾಟ ಮಾಡಿದರೆ ಅದರ ಅಗತ್ಯವಿರುವವರು ಕೊಂಡುಕೊಳ್ಳುತ್ತಾರೆ. ಇದರಿಂದ ಸದುಪಯೋಗವಾಗುತ್ತದೆ ಎಂದು ಹೇಳಲಾಗಿದೆ. ಸಾರ್ವಜನಿಕರಲ್ಲಿ ಈಗ ಆನ್‍ಲೈನ್ ಮಾರಾಟದ ಕುರಿತು ಹೆಚ್ಚಿನ ಅರಿವು ಮೂಡುತ್ತಿದ್ದು, ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಮಾರಾಟ ಮಾಡಿ ಬೇಕಾದುದ್ದನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin