ಸೆಂಟ್‍ಪೀಟರ್ಸ್ ಬರ್ಗ್‍ನಲ್ಲಿ ಮೋದಿ-ಪುಟಿನ್ ಭೇಟಿ : ಅಣುಶಕ್ತಿ ಒಪ್ಪಂದಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಸೆಂಟ್ ಪೀಟರ್ಸ್‍ಬರ್ಗ್ (ರಷ್ಯಾ), ಜೂ.1-ವಿದೇಶಿ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸೆಂಟ್‍ಪೀಟರ್ಸ್ ಬರ್ಗ್‍ನಲ್ಲಿ ರಷ್ಯಾ ಅಧ್ಯಕ್ಷ ಬ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದರು. ಇದರೊಂದಿಗೆ ಉಭಯ ದೇಶಗಳ ನಡುವೆ ಮಹತ್ವದ ಅಣುಶಕ್ತಿ ಒಪ್ಪಂದಕ್ಕೆ ಚಾಲನೆ ದೊರೆತಿದೆ. ರಷ್ಯಾ ಸಹಕಾರದೊಂದಿಗೆ ತಮಿಳುನಾಡಿನ ಕುದಂಕುಳಂ ಅಣುಶಕ್ತಿ ಸ್ಥಾವರದ ಕಡೆಯ ಎರಡು ಘಟಕಗಳ ನಿರ್ಮಾಣ ಕುರಿತ ಒಪ್ಪಂದಕ್ಕೆ ಮೋದಿ ಭೇಟಿಯಿಂದ ಚಾಲನೆ ದೊರೆತಿದೆ.ವಿಜ್ಞಾನ ಮತ್ತು ತಂತ್ರಜ್ಞಾನ, ರೈಲ್ವೆ, ಸಾಂಸ್ಕøತಿಕ ವಿನಿಮಯ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಮುನ್ನುಡಿಯಾಗಿದೆ. ಆರು ದಿನಗಳ ವಿದೇಶಿ ಪ್ರವಾಸದಲ್ಲಿ ಈಗಾಗಲೇ ಮೋದಿ ಅವರ ಜರ್ಮನಿ ಮತ್ತು ಸ್ಟೇನ್ ಭೇಟಿ ಅತ್ಯಂತ ಫಲಪ್ರದವಾಗಿದ್ದು, ರಷ್ಯಾದೊಂದಿಗಿನ ಬಾಂಧವ್ಯ ಮತ್ತಷ್ಟು ಬಲವರ್ಧನೆಯಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin