ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಬಾಬಿ ಡಿಯೋಲ್

ಈ ಸುದ್ದಿಯನ್ನು ಶೇರ್ ಮಾಡಿ

2

ಹಿಂದಿ ಚಿತ್ರರಂಗದ ಧರ್ತಿ ಕಾ ಪುತರ್ ಖ್ಯಾತಿಯ ಹಿರಿಯ ಅಭಿನೇತ ಧರ್ಮೇಂದ್ರರ ಕಿರಿಯ ಮಗ ಬಾಬಿ ಡಿಯೋಲ್ ಮತ್ತೆ ಬಾಲಿವುಡ್‍ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾನೆ. ಈತ ಚಿತ್ರ ನಟಿಸಿರುವ ಹೊಸ ಚಿತ್ರ ಸೆಪ್ಟೆಂಬರ್ 8ರಂದು ಬಿಡುಗಡೆಯಾಗಲಿದೆ. ಸಿನಿಮಾದ ಹೆಸರು ಪೋಸ್ಟರ್  ಬಾಯ್ಸ್. ಇದರ ಇನ್ನೊಂದು ವಿಶೇಷತೆ ಎಂದರೆ ಧರ್ಮೇಂದ್ರರ ಹಿರಿಯ ಪುತ್ರ ಮತ್ತು ನಟ ಸನ್ನಿ ಡಿಯೋಲ್ ಸಹ ಅಭಿನಯಿಸುತ್ತಿದ್ದಾನೆ. ಪೋಸ್ಟರ್  ಬಾಯ್ಸ್ ನಿರ್ದೇಶಕ ಶ್ರೇಯಸ್ ತಲ್‍ಪಾಡೆ ಸಹ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 50 ವರ್ಷದ ಬಾಬಿ ಯಮ್ಲಾ ಪಗ್ಲಾ ದೀವಾನ 2 ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಬಿಡುಗಡೆಯಾಗಿದ್ದು 2011ರಲ್ಲಿ. ತನ್ನ ತಂದೆ ಧರ್ಮೇಂದ್ರ ಮತ್ತು ಸಹೋದರ ಸನ್ನಿ ಸಹ ಇದರಲ್ಲಿ ನಟಿಸಿದ್ದರು.

ಆ ನಂತರ ಬಾಬಿಗೆ ಅವಕಾಶಗಳು ಲಭಿಸಲಿಲ್ಲ. ನೇಪಥ್ಯಕ್ಕೆ ಸರಿದಿದ್ದ ಅವರಿಗೆ ಈಗ ಪೋಸ್ಟರ್  ಬಾಯ್ಸ್ ಒಂದು ಉತ್ತಮ ಅವಕಾಶ ನೀಡಿದೆ. ಇನ್ನು ಸನ್ನಿ ನಟಿಸಿದ ಕೊನೆ ಸಿನಿಮಾ ಗಾಯಲ್ ಇನ್ಸ್ ಅಗೈನ್ (2016). ಧರ್ಮೇಂದ್ರ ನಿರ್ಮಿಸಿದ್ದ 1990ರಲ್ಲಿ ತೆರೆಕಂಡ ಸೂಪರ್‍ಹಿಟ್ ಸಿನಿಮಾ ಗಾಯಲ್‍ನ ಮುಂದುವರಿದ ಭಾಗ. ಸೋನಿ ಪಿಕ್ಚರ್ಸ್, ನೆಟ್‍ವಕ್ರ್ಸ್ ಪ್ರೊಡಕ್ಷನ್ಸ್, ಸನ್ನಿ ಸೌಂಡ್ ಪ್ರೈವೇಟ್ ಲಿಮಿಟೆಡ್ ಮತ್ತು ಆಫ್ಲ್ಯೂಯೆನ್ಸ್ ಮೂವೀಸ್ ಪ್ರೈವೇಟ್ ಲಿಮಿಟೆಡ್ ಈ ಸಿನಿಮಾವನ್ನು ನಿರ್ಮಿಸಿದೆ. ಚಿತ್ರದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಬಾಬಿ ಮತ್ತು ಸನ್ನಿಗೆ ಈ ಸಿನಿಮಾ ಅದೃಷ್ಟದ ಬಾಗಿಲು ತೆರೆಯಲಿ ಎಂಬುದೇ ಅಭಿಮಾನಿಗಳ ಸದಾಶಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin