ಸೆಕ್ಸಿ ನಟಿ ನರ್ಗಿಸ್ ಅಮೆರಿಕಕ್ಕೆ ಹಾರಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Nargeer

ಬಾಲಿವುಡ್ನ ಮಾದಕ ಮೈಮಾಟದ ಸೆಕ್ಸಿ ನಟಿ ನರ್ಗಿಸ್ ಫಕ್ರಿ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾಳೆ. ಈಕೆ ಹಲವಾರು ರೂಮರ್ಗಳ ಬಗ್ಗೆ ಪ್ರಶ್ನೆಗಳನ್ನು ಉಳಿಸಿ ಅಮೆರಿಕಕ್ಕೆ ಹಾರಿದ್ದು ಹಳೆಯ ಸುದ್ದಿ. ಈಗ ಬಂದಿರುವ ಹೊಸ ಸುದ್ದಿಯೆಂದರೆ ಆಕೆ ಅಮೆರಿಕಾಗೆ ಹಿಂದಿರುಗಲು ಕಾರಣವಾದರೂ ಏನು ಎಂಬುದು.   ನಟ ಉದಯ್ ಚೋಪ್ರಾ ಜೊತೆ ಲವ್ವಿ-ಡವ್ವಿ ಮುರಿದು ಬಿದ್ದ ನಂತರ ಈಕೆ ಹೌಸ್ಫುಲ್-3 ಚಿತ್ರದ ಪ್ರಚಾರಕ್ಕೂ ಬಾರದೆ ಯಾರಿಗೂ ಹೇಳದೆ ಕೇಳದೆ ಅಮೆರಿಕಕ್ಕೆ ಹಾರಿದ್ದಳು. ಆದರೆ ಇದಕ್ಕೆ ವಾಸ್ತವ ಕಾರಣವನ್ನೂ ನರ್ಗಿಸ್ ನೀಡಿದ್ದಾಳೆ. ನನಗೆ ಆರ್ಸೆನಿಕ್ (ನಂಜು ರೋಗ) ಎಂಬ ಮಾರಕ ಕಾಯಿಲೆ ಸಮಸ್ಯೆ ಇದೆ. ಅದರೊಂದಿಗೆ ನಾನು ಹೋರಾಡುತ್ತಿದ್ದೇನೆ. ಇದೇ ಕಾರಣಕ್ಕಾಗಿ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದೇನೆ ಎಂದು ಪತ್ರಿಕೆಯೊಂದಕ್ಕೆ ಸೆಕ್ಸ್ ನಟಿ ಹೇಳಿಕೊಂಡಿದ್ದಾಳೆ. ನನ್ನ ಬಗ್ಗೆ ಹಬ್ಬಿರುವ ವದಂತಿಗಳು ಶುದ್ಧ ಸುಳ್ಳು ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯಲು ಯತ್ನಿಸಿದ್ದಾಳೆ.

ಪ್ರೀತಿ ಮತ್ತು ಮದುವೆಯ ಬಗ್ಗೆಯೂ ಆಕೆ ಮಾತನಾಡಿದ್ದಾಳೆ. ನನಗೆ ಮದುವೆ ವಿಷಯದಲ್ಲಿ ವಿಶ್ವಾಸವಿಲ್ಲ. ಬಹುತೇಕ ಎಲ್ಲ ವಿವಾಹಗಳು ಮುರಿದುಬೀಳುತ್ತಿವೆ. ಈ ಮಂದಿ ಮೋಸ ಮಾಡುತ್ತಾರೆ. ಮ್ಯಾರೇಜ್ ಒಂದು ಲೇಬಲ್ ಅಲ್ಲದೇ ಮತ್ತೇನೂ ಅಲ್ಲ ಎಂಬ ಟೀಕೆಗಳೂ ಈಕೆಯಿಂದ ಕೇಳಿಬಂದಿವೆ.

► Follow us on –  Facebook / Twitter  / Google+

Facebook Comments

Sri Raghav

Admin