ಸೆಕ್ಸ್ ಟೇಪ್ ನಲ್ಲಿ ಸಿಕ್ಕಿಬಿದ್ದ ಮತ್ತೊಬ್ಬ ಆಪ್ ಶಾಸಕ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Sex

ನವದೆಹಲಿ ಸೆ. 01. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದಿಂದ ಮತ್ತೊಬ್ಬ ಸಚಿವನನ್ನು ವಜಾ ಮಾಡಲಾಗಿದೆ. ಸೆಕ್ಸ್ ಟೇಪ್ ನಲ್ಲಿ ಸಿಕ್ಕಿಬಿದ್ದ ಸಮಾಜ ಕಲ್ಯಾಣ ಸಚಿವ ಸಂದೀಪ್‌ ಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ. ಸಂದೀಪ್‌ ಅವರು ಮಹಿಳೆಯೊಬ್ಬರ ಜೊತೆ ಆಕ್ಷೇಪಾರ್ಹ ಭಂಗಿಯಲ್ಲಿರುವ ದೃಶ್ಯಗಳು ಹಾಗೂ ಚಿತ್ರಗಳು ಕೇಜ್ರಿವಾಲ್ ಕಚೇರಿಗೆ ರವಾನೆಯಾದ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.  ಸಂದೀಪ್‌ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವ ವಿಚಾರವನ್ನು ಕೇಜ್ರಿವಾಲ್‌ ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಅಸೀಂ ಅಹಮದ್‌ ಖಾನ್‌ ಅವರು ಲಂಚ ಕೇಳಿದ್ದಾರೆ ಎಂಬ ಆರೋಪದ ಅಡಿ ಅವರನ್ನು ಕಳೆದ ವರ್ಷ ಸಂಪುಟದಿಂದ ಕೈಬಿಡಲಾಗಿತ್ತು. ನಂತರ, ನಕಲಿ ಪದವಿ ಪ್ರಮಾಣಪತ್ರ ಹೊಂದಿದ ಆರೋಪದ ಅಡಿ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಕೇಜ್ರಿವಾಲ್ ಅವರು ಸಂಪುಟದಿಂದ ಕೈಬಿಟ್ಟಿದ್ದರು. ದೆಹಲಿಯಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ವರೆಗೆ ಒಟ್ಟು ಮೂವರು ಸಚಿವರನ್ನು ವಜಾ ಮಾಡಲಾಗಿದೆ.

9 ನಿಮಿಷಗಳ ವಿಡಿಯೊದಲ್ಲಿ 34 ವರ್ಷದ ಸಂದೀಪ್ ಕುಮಾರ್ ಇಬ್ಬರು ಮಹಿಳೆಯರ ಜತೆ ಆಕ್ಷೇಪಾರ್ಹ ಭಂಗಿಯಲ್ಲಿದ್ದರೆಂದು ಆಮ್ ಆದ್ಮಿ ನಾಯಕರು ಬಣ್ಣಿಸಿದ್ದಾರೆ. ಸಿಡಿಯ ಜತೆ 11 ಛಾಯಾಚಿತ್ರಗಳೂ ಇವೆ. ಕೆಲವು ಟಿವಿ ಚಾನೆಲ್‌ಗಳಿಗೆ ಸಂಜೆ ಸಿಡಿಗಳು ಸೋರಿಕೆಯಾಗಿದ್ದು, ಮುಖ್ಯಮಂತ್ರಿ ಪ್ರತಿಕ್ರಿಯೆಗಾಗಿ ಅವರಿಗೆ ಪ್ರತಿಯೊಂದನ್ನು ಕಳಿಸಿದ್ದವು. ಎಎಪಿ ಗೊಂದಲಕಾರಿ ಸ್ಥಿತಿಯಲ್ಲಿ ಸಿಲುಕಿತು.

► Follow us on –  Facebook / Twitter  / Google+

Facebook Comments

Sri Raghav

Admin