‘ಸೆಕ್ಸ್’ ಮಾಡಿ ಸಿಕ್ಕಿಬಿದ್ದ ಮತ್ತೊಬ್ಬ ಕಾಮಿ ಸ್ವಾಮಿ..!

ಈ ಸುದ್ದಿಯನ್ನು ಶೇರ್ ಮಾಡಿ

Swamiji-Sex--02

ಬೆಂಗಳೂರು,ಅ.26-ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರ ಕಾಮ ಪುರಾಣ ಬಯಲಾಗಿದೆ.  ಸ್ವಾಮೀಜಿಯು ಮಹಿಳೆಯೊಬ್ಬಳ ಜೊತೆ ಪಲ್ಲಂಗದಾಟ ನಡೆಸುತ್ತಿರುವ ಸಿಡಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಸ್ವಾಮೀಜಿ ಮಠದಿಂದ ಪರಾರಿಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್‍ಆಫ್ ಆಗಿದೆ.   ಮಠದ ಭಕ್ತರು, ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದು , ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಸ್ವಾಮೀಜಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಬೆಂಗಳೂರು ಮಹಾನಗರದ ಯಲಹಂಕ ಸಮೀಪದ ಹುಣಸಮಾರನ ಹಳ್ಳಿಯಲ್ಲಿರುವ ಐದು ಶತಮಾನಗಳ ಇತಿಹಾಸವುಳ್ಳ ಈ ಪ್ರತಿಷ್ಠಿತ ಮಠದಲ್ಲಿದ್ದ ಸ್ವಾಮೀಜಿಯ ಪುತ್ರ ದಯಾನಂದ ಸ್ವಾಮೀಜಿ ಎಂಬುವರ ಕಾಮಪುರಾಣ ಬಯಲಾಗಿದೆ.

Swamiji--Sex--04

ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳ ತಾಣವಾಗಿದ್ದ ಅತ್ಯಂತ ಶ್ರೀಮಂತ ಮಠಗಳಲ್ಲಿ ಒಂದಾಗಿದ್ದ ಈ ಮಠದಲ್ಲಿ ಇಂತಹ ಅಕ್ರಮ ಚುಟುವಟಿಕೆ ಬಹಿರಂಗಗೊಳ್ಳುತ್ತಿದ್ದಂತೆ ಮಠದ ಭಕ್ತರು, ಸುತ್ತಮುತ್ತಲ ಗ್ರಾಮಸ್ಥರು ಮಠಕ್ಕೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಕ್ಸ್ ಹಗರಣದಲ್ಲಿ ಸಿಲುಕಿಕೊಂಡಿರುವ ಈ ಸ್ವಾಮೀಜಿಗೆ ಯಾವುದೇ ಕಾರಣಕ್ಕೂ ಪಟ್ಟಾಭಿಷೇಕ ಮಾಡಬಾರದೆಂದು ಮೊದಲಿನಿಂದಲೂ ಟ್ರಸ್ಟಿಗಳು, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಆದರೆ ಹಿರಿಯ ಸ್ವಾಮೀಜಿಗಳು ಇವರಿಗೆ ಪಟ್ಟ ಕಟ್ಟಲು ಮುಂದಾಗಿದ್ದರು.

Swamiji--Sex--03

ಈ ಸಂದರ್ಭದಲ್ಲಿ ಇವರ ಕಾಮಪುರಾಣ ಬಯಲಾಗಿದೆ. ಮೊದಲಿನಿಂದಲೂ ಮಠದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಮಠಕ್ಕೆ ಸೇರಿದ ಬೆಲೆ ಬಾಳುವ ಆಸ್ತಿಯನ್ನು ಮಾರಾಟ ಮಾಡಿ ಮೋಜುಮಸ್ತಿ ನಡೆಸುತ್ತಿದ್ದರು ಎಂದು ಸುತ್ತಮುತ್ತಲ ಗ್ರಾಮಸ್ಥರು ಆರೋಪಿಸಿದ್ದಾರೆ. ಇಂತಹ ಸ್ವಾಮೀಜಿಯಿಂದ ನಮ್ಮ ಸಮುದಾಯಕ್ಕೆ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಅವರನ್ನು ಇಲ್ಲಿಂದ ಹೊಡೆದೋಡಿಸಬೇಕು. ಇಂಥವರಿಂದ ಮಠಮಂದಿರಗಳ ಬಗ್ಗೆ ಜನರಿಗೆ ತಪ್ಪು ಭಾವನೆ ಮೂಡುತ್ತದೆ ಎಂದು ಆರೋಪಿಸಿದ್ದಾರೆ.

Swamiji--Sex--02

ಆಡಳಿತ ಮಂಡಳಿಯಲ್ಲಿ ಭಿನ್ನಮತ:

ಮಠದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಈ ಹಿಂದೆಯೇ ಕೇಳಿಬಂದಿತ್ತು. ಆಡಳಿತ ಮಂಡಳಿಯಲ್ಲಿ ಈ ಸಂಬಂಧ ಭಿನ್ನಮತ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಲಾಗಿತ್ತು. ಮಠದಲ್ಲಿರುವ ನೂರಾರು ಕೋಟಿ ಮೌಲ್ಯದ ಆಸ್ತಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆಡಳಿತ ಮಂಡಳಿಯ ಕೆಲವರು ಪೊಲೀಸ್ ಠಾಣೆಗೆ ಈ ಹಿಂದೆ ದೂರು ಕೂಡ ನೀಡಿದ್ದರು.  ಆ ಸಂದರ್ಭದಲ್ಲಿ ಮಠದ ಮುಂದೆ ಗಲಾಟೆಯೂ ನಡೆದಿತ್ತು. ಈಗ ಅನೈತಿಕ ಚಟುವಟಿಕೆಯ ಸಿಡಿ ಬಹಿರಂಗಗೊಂಡು ಮಠದ ಮರ್ಯಾದೆ ಬೀದಿಗೆ ಬಿದ್ದಿದೆ.

Facebook Comments

Sri Raghav

Admin