ಸೆಮಿ ಫೈನಲ್‍ಗೆ ಸಿಂಧು : ಭಾರತದ ಪದಕ ಆಸೆ ಜೀವಂತ

ಈ ಸುದ್ದಿಯನ್ನು ಶೇರ್ ಮಾಡಿ

Sindi-Rioa

ರಿಯೊ ಡಿ ಜನೈರೋ, ಆ.17-ರಿಯೋ ಒಲಂಪಿಕ್ಸ್‍ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಗೆಲುವಿನ ಅಭಿಯಾನ ಮುಂದುವರೆದಿದೆ. ಇಲ್ಲಿ ನಡೆದ 11ನೇ ದಿನದ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‍ನಲ್ಲಿ ವಿಶ್ವದ ನಂ.2 ಆಟಗಾರ್ತಿ ಚೀನಾದ ವಾಂಗ್ ಯಿಹಾನ್‍ನನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತದ ಪದಕ ಗೆಲ್ಲುವ ಆಸೆ ಇನ್ನೂ ಜೀವಂತವಾಗಿದೆ.  ರಿಯೋ ಸೆಂಟ್ರೊ ಪೆವಿಲಿಯನ್ 4ನಲ್ಲಿ ನಡೆದ 54 ನಿಮಿಷಗಳ ಹೋರಾಟದ್ಝಲ್ಲಿ ಸಿಂಧು-ವಾಂಗ್‍ರನ್ನು 22-20, 21-19ರ ನೇರ ಸೆಟ್‍ಗಳಿಮದ ಮಣಿಸಿ ಉಪಾಂತ್ಯ ತಲುಪಿದರು.

ಹೈದರಾಬಾದ್‍ನ 21 ವರ್ಷದ ಸಿಂಧು ಆಕ್ರಮಣಕಾರಿ ಆಟದಿಂದ ವಿಶ್ವದ ಮಾಜಿ ನಂ.1 ಆಟಗಾರ್ತಿ ವಾಂಗ್ ಬೆಸ್ತು ಬಿದ್ದರು. ಎರಡು ಸೆಟ್‍ಗಳಲ್ಲಿ ಪ್ರಾಬಲ್ಯ ತೋರಿದ ಭಾರತದ ಭರವಸೆಯ ಆಟಗಾರ್ತಿ ಚೀನಾ ಷಟ್ಲರ್‍ಗೆ ಸೋಲಿನ ರುಚಿ ತೋರಿಸಿ ಆಘಾತ ನೀಡಿದರು.  ಚೊಚ್ಚಲ ಒಲಂಪಿಕ್ಸ್ ಪದಕದ ನಿರೀಕ್ಷೆಯಲ್ಲಿರುವ ಸಿಂಧು 10ನೇ ದಿನದ ಪಂದ್ಯದಲ್ಲಿ ಚೀನಾ ತೈಪೆಯ ಥೈ ಜು ಯಿಂಗ್ ಅವರನ್ನು 21-13, 21-15ರ ನೇರ ಸೆಟ್‍ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.  ಎರಡು ಬಾರಿ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಗೆದ್ದು ಸಾಧನೆ ಮಾಡಿರುವ ಸಿಂಧು ರಿಯೋದಲ್ಲೂ ಪದಕ ಗೆಲ್ಲುವ ಭರವಸೆಯ ಆಶಾಕಿರಣವಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin