ಸೆಲ್ಫೀ ಗೀಳು : ಮಹಿಳೆಗೆ ಗರಗಸ ಹಲ್ಲಿನ ರುಚಿ ತೋರಿಸಿದ ಮೊಸಳೆ..!

ಈ ಸುದ್ದಿಯನ್ನು ಶೇರ್ ಮಾಡಿ

asdfsgdgsg

ಬ್ಯಾಂಕಾಕ್, ಜ.3-ಸೆಲ್ಫೀ ಗೀಳು ಕೆಲವೊಮ್ಮೆ ಅತ್ಯಂತ ಅಪಾಯಕಾರಿ ಪರಿಣಮಿಸುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಸೆಲ್ಫೀ ತೆಗೆಯುತ್ತಿದ್ದ ವೇಳೆ ಮೊಸಳೆಯೊಂದು ಹಠಾತ್ ದಾಳಿ ನಡೆಸಿ ಫ್ರೆಂಚ್ ಪ್ರವಾಸಿ ಮಹಿಳೆಯನ್ನು ಗಾಯಗೊಳಿಸಿರುವ ಘಟನೆ ಥೈಯ್ಲೆಂಡ್‍ನ ಖೊಯೊಯ್ ನ್ಯಾಷನಲ್ ಪಾರ್ಕ್‍ನಲ್ಲಿ ನಡೆದಿದೆ. ಮಹಿಳೆಯ ಕಾಲಿಗೆ ಆಳವಾದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ.   ತನ್ನ ಪತ್ನಿಯೊಂದಿಗೆ ಮೊಸಳೆಯನ್ನು ಹಿನ್ನೆಲೆಯಾಗಿಟ್ಟುಕೊಂಡು 44 ವರ್ಷದ ಬೆನೆಟೂಲಿಯರ್ ಸೆಲ್ಫಿ ತೆಗೆಯುತ್ತಿದ್ದಳು. ಆಗ ಕೊಳದಲ್ಲಿದ್ದ ಇನ್ನೊಂದು ಮೊಸಳೆ ಹಠಾತ್ ದಾಳಿ ನಡೆಸಿ ಗರಗಸದಂಥ ಹಲ್ಲಿನಿಂದ ಕಚ್ಚಿತು. ತಕ್ಷಣ ಭದ್ರತಾ ಗಾರ್ಡ್‍ಗಳು ರಕ್ಷಣೆಗೆ ಧಾವಿಸಿ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದರು. ಕಾಲಿಗೆ ಆಳವಾದ ಗಾಯಗಳಾಗಿರುವ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ರಾಷ್ಟ್ರೀಯ ಉದ್ಯಾನವನದಲ್ಲಿ ಮೊಸಳೆ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ಫಲಕಗಳನ್ನು ಹಾಕಿದ್ದರೂ ಅದನ್ನು ಲೆಕ್ಕಿಸದೇ ಮಹಿಳೆ ಸೆಲ್ಫೀ ತೆಗೆಯುವ ದುಸ್ಸಾಹಸಕ್ಕೆ ಕೈಹಾಕಿದ್ದರಿಂದಲೇ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin