ಸೆ.18ರಂದು ಕಾವೇರಿ ನ್ಯಾಯಮಂಡಳಿಯಿಂದ ಮಹತ್ವದ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಬೆಂಗಳೂರು, ಸೆ.11- ಕಾವೇರಿ ನ್ಯಾಯಾಧಿಕರಣ-2007 ಫೆಬ್ರವರಿ 5ರಂದು ನೀಡಿರುವ ತೀರ್ಪನ್ನು ಮರು ಪರಿಷ್ಕರಣೆ ಮಾಡಬೇಕು. ನೀರು ಹಂಚಿಕೆ ಸಂಬಂಧ ತಮಿಳುನಾಡಿಗೆ ನಿಗದಿಪಡಿಸಿರುವ ನೀರಿನಲ್ಲಿ 30 ಟಿಎಂಸಿ ನೀರನ್ನು ಕಡಿಮೆ ಮಾಡಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಸೆ.18ರಂದು ವಿಚಾರಣೆಗೆ ಬರಲಿದ್ದು, ತೀರ್ಪು ಸರ್ಕಾರದ ಪರವಾದರೆ, ಐತಿಹಾಸಿಕ ತೀರ್ಪಾಗುತ್ತದೆ. ರೈರತಿಗೆ ಸಂಕಷ್ಟ ಖಚಿತ.   2007 ಫೆ.5ರಂದು ಕಾವೇರಿ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿದ್ದು, ತಮಿಳುನಾಡಿಗೆ 490 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಮಾಡಿತ್ತು.   ಇದರ ಪ್ರಕಾರ, ತಮಿಳುನಾಡಿಗೆ ಹರಿದು ಹೋಗುವ ನೀರಿನಲ್ಲಿ 10 ಟಿಎಂಸಿ ಪರಿಸರಕ್ಕೆ, 50 ಟಿಎಂಸಿ ಅಂತರ್ಜಲವೃದ್ಧಿಗೆ ಹೋಗುತ್ತದೆ. ಸದ್ಯ ತಮಿಳುನಾಡಿನಲ್ಲಿ ಅಂತರ್ಜಲ ಸಮೃದ್ಧಿಯಾಗಿದೆ. ತೀರ್ಪು ಪ್ರಕಟವಾಗುವಾಗಲೇ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಶೇ.60ರಷ್ಟಿತ್ತು. ತಮಿಳುನಾಡಿನಲ್ಲಿ ಶೇ.30ರಷ್ಟಿತ್ತು.

ಇಂತಹ ಸಂದರ್ಭದಲ್ಲಿ ಅಂತರ್ಜಲವೃದ್ಧಿಗೆ ನ್ಯಾಯಾಧಿಕರಣ 50 ಟಿಎಂಸಿ ನೀರು ಬಿಡಬೇಕೆಂದು ತೀರ್ಪು ನೀಡಿದೆ. ಇದನ್ನು ಆಕ್ಷೇಪಿಸಿ ನಮ್ಮ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ತಮಿಳುನಾಡಿಗೆ ಹಂಚಿಕೆಯಾಗಿರುವ ನೀರಿನಲ್ಲಿ 30 ಟಿಎಂಸಿ ನೀರನ್ನು ಕಡಿಮೆ ಮಾಡಬೇಕೆಂದು ಕೋರಿದ್ದರು.  ವಾಡಿಕೆಯಂತೆ ಜೂನ್‍ನಿಂದ ಸೆಪ್ಟೆಂಬರ್ ಅವಧಿಯೊಳಗೆ 192 ಟಿಎಂಸಿ ನೀರು ಬಿಡಬೇಕು. ಮಳೆಯಾಗದ ಪರಿಣಾಮ ನಿಗದಿತ ನೀರನ್ನು ಬಿಡಲು ಆಗಿಲ್ಲ. ತಮಿಳುನಾಡಿಗೆ ಈಶಾನ್ಯ ಭಾಗದ ಮಳೆ ಪ್ರಾರಂಭವಾಗಿದೆ. ಇದರಿಂದ ಸಮೃದ್ಧಿಯಾದ ನೀರು ಅವರಿಗೆ ಸಿಗುತ್ತದೆ.
ಬೆಂಗಳೂರಿಗೆ ಕುಡಿಯಲು 1.75 ಟಿಎಂಸಿ ನೀರು ಬೇಕು. ಬಿಡುಗಡೆಯಾದ ನೀರಿನ ಪ್ರಮಾಣ ಮಾಪನ ಕೇಂದ್ರ ವÉುಟ್ಟೂರು ಡ್ಯಾಮ್‍ಗಿಂತ 50ಕಿ.ಮೀ. ಹಿಂದೆ ಇರುವ ಬಿಳಿಗೊಂಡ್ಲು ಪ್ರದೇಶದಲ್ಲಿದೆ. ಅಲ್ಲಿಂದ ಹರಿದು ಹೋಗುವಾಗ ಸಾಕಷ್ಟು ನೀರು ಇಂಗಿ ಹೋಗುತ್ತದೆ. ಇದು ಲೆಕ್ಕಕ್ಕೆ ಸಿಗುವುದಿಲ್ಲ. ಈ ಮಾಪನ ಕೇಂದ್ರವನ್ನು ಬೇರೆ ಕಡೆ ಮಾಡಬೇಕು ಎಂದು ಕೂಡ ಕೋರಲಾಗಿದೆ.

ಸೆ.18ರಂದು ಈ ಸಂಬಂಧ ತೀರ್ಪು ಹೊರಬರುವ ನಿರೀಕ್ಷೆಯಿದೆ. ಈಗಾಗಲೇ ಕಾವೇರಿಯಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ರಾಜ್ಯ ಹೊತ್ತಿ ಉರಿದಿದೆ.
ಇದಕ್ಕಾಗಿ ಹಲವಾರು ಹೋರಾಟಗಳು ನಡೆದಿವೆ. ತೀರ್ಪು ವ್ಯತಿರಿಕ್ತವಾದರೆ ಸರ್ಕಾರ ಮತ್ತೆ ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.   ಹೀಗಾಗಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಾನೂನು ತಜ್ಞರು ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ನಾರಿಮನ್ ವಕೀಲರ ತಂಡದೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.  ನಾಳೆ ಮೇಲುಸ್ತುವಾರಿ ಸಮಿತಿ ಮುಂದೆ ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದ್ದು, ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಮರು ಪರಿಶೀಲನೆ ಮಾಡಬೇಕೆಂದು ಸಲ್ಲಿಸಿರುವ ಅರ್ಜಿ ಸಂಬಂಧ ವಾದ ಮಾಡಲು ಮತ್ತು ಸುಪ್ರೀಂಕೋರ್ಟ್‍ಗೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಶಕ್ತಿಮೀರಿ ಶ್ರಮಿಸಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin