ಸೆ.2ರಂದು ನಡೆಯುವ ಸಾರಿಗೆ ಮುಷ್ಕರಕ್ಕೆ ಆಟೋ ಯೂನಿಯನ್ ಬೆಂಬಲ
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು, ಆ.30- ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಸ್ತೆ ಸಾರಿಗೆ ಮತ್ತು ಸುರಕ್ಷತೆ ಮಸೂದೆ-2016 ಖಂಡಿಸಿ ಸೆ.2ರಂದು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿರುವ ಸಾರಿಗೆ ಮುಷ್ಕರಕ್ಕೆ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಬೆಂಬಲ ವ್ಯಕ್ತಪಡಿಸಿರುವುದಾಗಿ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದ್ದಾರೆ. ಈ ಮಸೂದೆ ಜಾರಿಮಾಡುವುದರಿಂದ ಭಾರತದ ಇಡೀ ಸಾರಿಗೆ ವ್ಯವಸ್ಥೆಯನ್ನೇ ಕಾರ್ಪೊರೇಟ್ ವಲಯಕ್ಕೆ ತೆರೆದಿಡುವ ಹುನ್ನಾರ ಹೊಂದಿದ್ದು, ದೇಶದಲ್ಲಿರುವ 64 ಸರ್ಕಾರಿ ಒಡೆತನದ ನಿಗಮಗಳು, ಖಾಸಗಿ ಸಾರಿಗೆ ವ್ಯವಸ್ಥೆ ಹಾಗೂ ಆಟೋ, ಟ್ಯಾಕ್ಸಿಗಳು ಅಪಾಯಕ್ಕೆ ಸಿಲುಕಲಿವೆ. ಇದರಿಂದ ಲಕ್ಷಾಂತರ ಕಾರ್ಮಿಕರು, ಅವರ ಕುಟುಂಬಗಳು ಬೀದಿಗೆ ಬೀಳುವ ಅಪಾಯವಿರುವುದರಿಂದ ಇದನ್ನು ವಿರೋಸಿ ಸೆ.2ರ ಬಂದ್ಗೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.
► Follow us on – Facebook / Twitter / Google+
Facebook Comments