ಸೆ.20ಕ್ಕೆ ಕುಂದಾಣ ಸಹಕಾರ ಸಂಘದ ಸಭೆ
ದೇವನಹಳ್ಳಿ, ಸೆ.8- ತಾಲೂಕಿನ ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ 2015-16ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.20ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಮೇಶ್ ತಿಳಿಸಿದರು.ಸಭೆಗೆ ಹಾಜರಾದ ಸದಸ್ಯರು ಹಾಜರು ಪುಸ್ತಕಗಳನ್ನು ತಪ್ಪದೆ ಸಹಿ ಮಾಡಿ ಸದಸ್ಯತ್ವದ ಸಂಖ್ಯೆಯನ್ನು ಬರೆದು ಹಾಗೂ ವಿಳಾಸದ ಬದಲಾವಣೆ ಇದ್ದಲ್ಲಿ ಲಿಖಿತದ ಮೂಲಕ ತಿಳಿಸಬೇಕು. ಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಇಚ್ಛಿಸುವ ಸದಸ್ಯರು ಸಭೆ ಗೊತ್ತುಪಡಿಸಿದ 7 ದಿನದ ಮುಂಚಿತವಾಗಿ ಲಿಖಿತವಾಗಿ ತಿಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ವಿ.ಮುನಿರಾಜು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್.ಸೊಣ್ಣಪ್ಪ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸಿ.ಎಸ್.ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ.
► Follow us on – Facebook / Twitter / Google+