ಸೆ.23ರಂದು ಭೂಮಿಗೆ ಅಪ್ಪಳಿಸಲಿದೆ ಕ್ಷುದ್ರಗ್ರಹ, ಬಂದರೆಗಲಿದಯೇ ವಿನಾಶಕಾರಿ ಸುನಾಮಿ..!?

ಈ ಸುದ್ದಿಯನ್ನು ಶೇರ್ ಮಾಡಿ

Nibiru

ವಾಷಿಂಗ್ಟನ್, ಸೆ.20-ಭೂಮಿಯ ಆಯಸ್ಸು ಮುಗಿದಿದೆ ಎಂಬ ಬಗ್ಗೆ ವಿಶ್ವಾದ್ಯಂತ ಪರ-ವಿರೋಧ ಅಭಿಪ್ರಾಯಗಳ ಚರ್ಚೆ ನಡೆಯುತ್ತಿರುವಾಗಲೇ, ಜಗತ್ತನ್ನು ಮತ್ತೊಮ್ಮೆ ಕಂಗೆಡಿಸಿರುವ ವಿದ್ಯಮಾನ ಎಂದರೆ ಸೆ. 23ರ (ಶನಿವಾರ) ಮಹಾಪ್ರಳಯ ಭೀತಿ. ಅಂದು ದೈತ್ಯ ಕ್ಷುದ್ರಗ್ರಹ (60 ಮೈಲಿ ಸುತ್ತಳತೆಯ ಅಸ್ಟೆರಾಯ್ಡ್) ವಸುಂಧರೆಯ ಒಡಲನ್ನು ಅಪ್ಪಳಿಸಲಿದೆ, ತತ್ಪರಿಣಾಮವಾಗಿ ವಿನಾಶಕಾರಿ ಸುನಾಮಿ ಇಡೀ ಭೂಮಂಡಲವನ್ನು ಆಪೋಶನ ತೆಗೆದುಕೊಳ್ಳಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

ಈ ಮಹಾಪ್ರಳಯ ಸಾಧ್ಯಾಸಾಧ್ಯತೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದ್ದು, ಶೇ.60ರಷ್ಟು ಮಂದಿ ಈ ಘೋರ ವಿಪತ್ತಿಗೆ ಸೆ.23 ಮುನ್ನುಡಿಯಾಗಲಿದೆ ಎಂಬ ಬಲವಾದ ವಾದ ಮಂಡಿಸುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ತಕ್ಕಮಟ್ಟಿಗೆ ಸಿದ್ದಾಂತಗಳು ಮತ್ತು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ.
ಈ ವಿಶ್ವವು ಆವಿಯಾಗಲು 7 ಶತಕೋಟಿ ವರ್ಷಗಳು ಬೇಕು. ಜಗತ್ತಿಗೆ ಬೆಳಕು ಕೊಡುತ್ತಿರುವ ಸೂರ್ಯ ಅಕ್ಷರಶಃ ದೈತ್ಯಾಕಾರದ ಬೆಂಕಿ ಚೆಂಡಾಗಿ ದೊಡ್ಡದಾಗುತ್ತಾ ಮಹಾಸ್ಫೋಟಗೊಳ್ಳುತ್ತಾನೆ. ಇದರ ಭೀಕರತೆಗೆ ಇಡೀ ಇಳೆ ಸುಟ್ಟು ಕರಕಲಾಗಿ ಆವಿಯಾಗುತ್ತದೆ ಎಂಬುದು ನಾವೆಲ್ಲರೂ ನಂಬಿರುವ ಸಿದ್ದಾಂತ.

Disruption_planets_collision-HD

ಸುಮಾರು 110 ಕಿ.ಮೀ. ವ್ಯಾಪ್ತಿಯ ದೈತ್ಯ ಕ್ಷುದ್ರಗ್ರಹ ಅದೇ ದಿನ ಭೂಮಿಗೆ ಅಪ್ಪಳಿಸಿ ಧರಣಿಯ ಗರ್ಭವನ್ನು ಬಗೆಯಲಿದೆ. ಇದರಿಂದ ಸಮುದ್ರದ ಒಡಲಲ್ಲಿ ಅಲ್ಲೋಲಕಲ್ಲೋಲವಾಗಿ ಮುಗಿಲೆತ್ತರದ ಸುನಾಮಿ ಅಲೆಗಳು ಭೂಮಿಯನ್ನು ಕಬಳಿಸಲಿದೆ ಎಂಬುದು ಒಂದು ಸಮುದಾಯದ ವಾದ. ಕೆಲವರು ಇದೊಂದು ಕಪೋಲ ಕಲ್ಪಿತ ವಿತಂಡವಾದ ಎಂದು ತಮ್ಮದೇ ಆದ ಪ್ರತಿವಾದಗಳೊಂದಿಗೆ ಸಾಕ್ಷಿ-ಪುರಾವೆಗಳನ್ನು ಮಂಡಿಸಿದ್ದಾರೆ. ಇದೇ ವೇಳೆ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಅನ್‍ಸೀಲ್ಡ್ ಹೆಸರಿನಲ್ಲಿ ಕ್ರೈಸ್ತ ಪಂಥವೊಂದು ಸೆ.23ರ ಮಹಾಪ್ರಳಯ ಸಂಭವಿಸುವುದು ದಿಟ ಎಂಬುದನ್ನು ಖಚಿತಪಡಿಸುವ ಲೇಖನವೊಂದು ಪ್ರಕಟಗೊಂಡಿದೆ.

ಅಲ್ಲದೇ ಈಗಾಗಲೇ ಯುಟ್ಯೂಬ್‍ಗಳಲ್ಲಿ ಇದಕ್ಕೆ ಇಂಬು ಕೊಡುವಂತೆ ಅನೇಕ ಪ್ರಾತಿನಿಧಿಕ ದೃಶ್ಯಗಳೂ ಸಾಕಷ್ಟು ಸುದ್ದಿ ಮಾಡಿವೆ. ನಾಲ್ಕು ನಿಮಿಷದ ವಿಡಿಯೋ ಒಂದರಲ್ಲಿ ಏಳುತಲೆಗಳ ಘಟಸರ್ಪವೊಂದು ಗರ್ಭವತಿಯಾದ ದೇವತೆ ಮೇಲೆ ದಾಳಿ ನಡೆಸುವ ದೃಶ್ಯವಿದೆ. ಮಹಿಳೆಯನ್ನು ಭೂಮಿಯಾಗಿ, ಹಾಗೂ ಸರ್ಪವನ್ನು ವಿನಾಶಕಾರಿ ಸುನಾಮಿ ಎಂಬಂತೆ ಬಿಂಬಿಸಲಾಗಿದೆ.

ಈ ವಾದ-ಪ್ರತಿವಾದ ಮತ್ತು ವಿರೋಧಾಭಾಸ ಹೇಳಿಕೆಗಳ ನಡುವೆಯೇ ಜಗತ್ತಿನ ವಿವಿಧೆಡೆ ಸಂಭವಿಸುತ್ತಿರುವ ಜಲಪ್ರಳಯ, ಭೂಕಂಪ, ಮುಂತಾದ ನೈಸರ್ಗಿಕ ಪ್ರಕೋಪಗಳೂ ಕಾಕತಾಳೀಯವೋ ಅಥವಾ ಮುನ್ಸೂಚನೆಯೋ ಎಂಬ ಚರ್ಚೆಗೂ ಕಾರಣವಾಗಿದೆ.  ಒಟ್ಟಾರೆ ಸೆ.23ರಂದು ಮಹಾಪ್ರಳಯದ ಬಗ್ಗೆ ವಿಶ್ಯಾದ್ಯಂತ ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

855616

Facebook Comments

Sri Raghav

Admin