ಸೆ.4ಕ್ಕೆ ರಾಜ್ಯಕ್ಕಾಗಮಿಸುತ್ತಿದ್ದಾರೆ ಬಿಜೆಪಿ ನೂತನ ಚುನಾವಣಾ ಉಸ್ತುವಾರಿ ಜಾವಡೇಕರ್

ಈ ಸುದ್ದಿಯನ್ನು ಶೇರ್ ಮಾಡಿ

prakash

ಬೆಂಗಳೂರು, ಆ.30- ರಾಜ್ಯ ಬಿಜೆಪಿ ನೂತನ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸೆ.4 ರಂದು ರಾಜ್ಯಕ್ಕೆ ಆಗಮಿಸಲಿದ್ದು,ಅಧಿಕೃತವಾಗಿ ಜವಾಬ್ದಾರಿ ನಿರ್ವಹಣೆ ಆರಂಭಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಸಂಚಲನ ಮೂಡಿದೆ. ಪಕ್ಷದ ಚಟುವಟಿಕೆಯನ್ನು ಇನ್ನಷ್ಟು ಬಿರುಸುಗೊಳಿಸಲು ಕಾರ್ಯಚಟುವಟಿಕೆಗೆ ಚಾಲನೆ ಸಿಕ್ಕಿದ್ದು, ಅಮಿತ್ ಶಾ ಸೂಚನೆಯಂತೆ ಪಕ್ಷದ ರಾಜ್ಯ ವ್ಯವಹಾರಗಳ ಮೇಲೆ ನಿಗಾ ಇಡಲು ಜಾವಡೇಕರ್ ನಗರಕ್ಕೆ ಆಗಮಿಸುತ್ತಿದ್ದಾರೆ.

ರಾಜ್ಯ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಸೆ.4 ರಂದು ರಾಜ್ಯಕ್ಕೆ ಆಗಮಿಸಲಿರುವ ಜಾವ ಡೇಕರ್ ಬಿಜೆಪಿ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಲಿ ದ್ದಾರೆ. ರಾಜ್ಯ ಬಿಜೆಪಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯನ್ನೂ ನಡೆಸಲಿದ್ದು, ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿ ನಾಯಕರು ನವೆಂಬರ್‍ನಲ್ಲಿ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅತಿ ದೊಡ್ಡ ರಥಯಾತ್ರೆ ಆಯೋ ಜಿಸಲು ನಿರ್ಧರಿಸಿದ್ದಾರೆ. ರಾಜ್ಯ ನಾಯಕರ ಈ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಬಲ ಸೂಚಿಸಿದ್ದು, ಖುದ್ದು ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ಸಿಗೆ ಸಹಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬರುವ ನವೆಂಬರ್‍ನಿಂದ ಜನವರಿವರೆಗೆ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಹಾದು ಹೋಗುವ ಬಿಜೆಪಿಯ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಮೋದಿ, ಶಾ ಪಾಲ್ಗೊಳ್ಳುವುದು ಖಚಿತವಾದರೂ ಅಂತಿಮ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಬಿಜೆಪಿ ಮೂಲಗಳು ದೃಢಪಡಿಸಿವೆ.

2 ತಿಂಗಳ ರಥಯಾತ್ರೆ:

ಈ ಬಾರಿ ಬಿಜೆಪಿ ಆಯೋಜಿಸಿರುವ ನವಕರ್ನಾಟಕ ಪರಿವರ್ತನ ಯಾತ್ರೆಯು ಎಲ್ಲ 224 ವಿಧಾನಸಭಾ ಕ್ಷೇತ್ರಗಳನ್ನೂ ತಲುಪಲಿದೆ. ಯಾತ್ರೆಗೆ ಚಾಲನೆ ನೀಡಲು ಮೋದಿ ಅಥವಾ ಅಮಿತ್ ಇಬ್ಬರಲ್ಲೊಬ್ಬರು ಇಲ್ಲವೇ ಇಬ್ಬರೂ ಆಗಮಿಸಲಿದ್ದಾರೆ.  ಇಡೀ ಯಾತ್ರೆಯ ಒಂದಿಲ್ಲೊಂದು ಭಾಗದಲ್ಲಿ ಇಬ್ಬರೂ ನಾಯಕರು ಭಾಗಿಯಾಗುವುದಂತೂ ಖಚಿತವಾಗಿದೆ. ಈ ಯಾತ್ರೆ ನವೆಂಬರ್‍ನಲ್ಲಿ ಆರಂಭವಾದರೆ (60-70 ದಿನ) ಜನವರಿವರೆಗೂ ರಾಜ್ಯಾದ್ಯಂತ ಸಂಚರಿಸಲಿದೆ. ಶೀಘ್ರದಲ್ಲೇ ರಾಜ್ಯ ಘಟಕ ಯಾತ್ರೆಯ ದಿನಾಂಕ ನಿಗದಿಪಡಿಸಿ ವರಿಷ್ಠರಿಗೆ ಕಳಿಸಿದ ನಂತರ ಮೋದಿ, ಶಾ ಪ್ರವಾಸ ದಿನಾಂಕ ತಿಳಿಯಲಿದೆ.

ಪ್ರತಿ ದಿನ 4-5 ಸಭೆ:

ಪ್ರಯಾಣದ ಜತೆಯಲ್ಲೇ ವೇದಿಕೆಯೂ ಆಗುವಂತಹ ರಥವನ್ನು ಯಾತ್ರೆ ಗೆಂದೇ ಸಿದ್ಧಪಡಿಸಲಾಗುತ್ತದೆ. ರಥವು ಪ್ರತಿದಿನ 4-5 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಪ್ರತಿ ಕ್ಷೇತ್ರದ ಪ್ರಾರಂಭದಿಂದ ಕಾರ್ಯಕರ್ತರಿಂದ ಸ್ವಾಗತ, ನಿಗದಿಓತ ಸ್ಥಳದಲ್ಲಿ ಸಾರ್ವಜನಿಕ ಭಾಷಣದ, ಕ್ಷೇತ್ರದ ಗಡಿ ಮುಗಿಯುವವರೆಗೂ ತೆರಳಿ ಬೀಳ್ಕೊಡುಗೆ ನೀಡಲಾಗುತ್ತದೆ.  ಬಿಸ್‍ವೈ ಜತೆಗೆ ಪ್ರಮುಖ ನಾಯಕರೆಲ್ಲರೂ ಜತೆಗಿರಲಿದ್ದಾರೆ. ಶೀಘ್ರ ಎಲ್ಲಾ ನಾಯಕರೂ ಚರ್ಚಿಸಿ ಅಂತಿಮ ರೂಪುರೇಷೆ ಸಿದ್ಧವಾಗಲಿದೆ ಎಂದು ಪ್ರಮುಖ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಹಿಂದೆ ಆದ ರಥಯಾತ್ರೆ:

ರಾಜ್ಯ ರಾಜಕೀಯದ ಇತಿಹಾಸ ಕೆದಕಿದಾಗ ಹಲವು ರಾಜಕೀಯ ರಥಯಾತ್ರೆಗಳು ನಡೆದಿವೆ.
1999ರಲ್ಲಿ ಎಸ್. ಎಂ. ಕೃಷ್ಣ ಅವರು ಪಾಂಚಜನ್ಯ ರಥಯಾತ್ರೆ ನಡೆಸಿದ್ದರು. ಬಿ.ಎಸ್.ಯಡಿಯೂರಪ್ಪ ಸಹ ಅದೇ ವರ್ಷ ಯಾತ್ರೆ ಮಾಡಿದ್ದರು.   ರಾಮಮಂದಿರ ಹೋರಾಟ, ಸ್ವಾತಂತ್ರ್ಯ 50ನೆ ವರ್ಷಾಚರಣೆ ಸೇರಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ 5 ಬಾರಿ ರಾಜ್ಯದ ಕೆಲವೆಡೆ ರಥಯಾತ್ರೆ ನಡೆಸಿರುವುದು ಪ್ರಮುಖ ಘಟನೆಗಳು. ಆದರೆ ಈ ಯಾವ ಯಾತ್ರೆಗಳೂ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಸಂಪರ್ಕಿಸಿರಲಿಲ್ಲ.

Facebook Comments

Sri Raghav

Admin