ಸೇತುವೆಗೆ ಅಪ್ಪಳಿಸಿ ದೋಣಿ, 26 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Boat-accidnet

ಯಾನ್‍ಗೋನ್ (ಮ್ಯಾನ್ಮಾರ್), ಏ.8-ಮದುವೆ ಸಮಾರಂಭದಿಂದ ಹಿಂದಿರುಗಿತ್ತಿದ್ದ ದೋಣಿಯೊಂದು ಸೇತುವೆಗೆ ಅಪ್ಪಳಿಸಿ ಅದರಲ್ಲಿದ್ದ 26 ಪ್ರಯಾಣಿಕರು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ಪಶ್ಚಿಮ ಮ್ಯಾನ್ಮಾರ್‍ನಲ್ಲಿ ಸಂಭವಿಸಿದೆ. ಈ ದುರಂತದಲ್ಲಿ ಇನ್ನೂ ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ವಾಣಿಜ್ಯ ರಾಜಧಾನಿ ಯಾನ್‍ಗೋನ್‍ನ ಪಶ್ಚಿಮ ಬಂದರು ಪಟ್ಟಣದ ಪತೀನ್ ನದಿಯಲ್ಲಿ ನಿನ್ನೆ ರಾತ್ರಿ 80 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸೇತುವೆಗೆ ಡಿಕ್ಕಿ ಹೊಡೆದು ಮುಳುಗಿತು ಎಂದು ಜಾಲೀಸರು ತಿಳಿಸಿದ್ದಾರೆ. ಮೃತ 26 ಮಂದಿಯಲ್ಲಿ ಬಹುತೇಕ ಮಹಿಳೆಯರಾಗಿದ್ದು, ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಇದರಲ್ಲಿದ್ದರು.

ನದಿಯಲ್ಲಿ ಮುಳುಗಿರುವವರಿಗಾಗಿ ತೀವ್ರ ಶೋಧ ಮುಂದುವರಿದಿದೆ. ಈವರೆಗೆ 30 ಜನರನ್ನು ರಕ್ಷಿಸಲಾಗಿದೆ. ದುರಂತದಲ್ಲಿ ಕೆಲವರು ನಾಪತ್ತೆಯಾಗಿದ್ದು, ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin