ಸೇನಾ ದಿನಾಚರಣೆ : ಯೋಧರಿಗೆ ರಾಷ್ಟ್ರಪತಿ, ಪ್ರಧಾನಿ ಯಿಂದ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

Army-Day--02
ನವದೆಹಲಿ, ಜ.15-ಸೇನಾ ದಿನಾಚರಣೆ ಪ್ರಯುಕ್ತ ಭಾರತೀಯ ಸೇನಾ ಪಡೆಗಳ ಅಧಿಕಾರಿಗಳು ಮತ್ತು ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ. ಸೇನಾ ದಿನಾಚರಣೆ ಸಂದರ್ಭದಲ್ಲಿ ಭಾರತೀಯ ಸೇನೆಯ ವೀರ ಪುರುಷರು ಮತ್ತು ಮಹಿಳೆಯರು, ನಿವೃತ್ತ ಸೇನಾನಿಗಳು ಮತ್ತು ಸೇನಾ ಕುಟುಂಬಗಳಿಗೆ ಶುಭ ಕೋರುತ್ತೇನೆ. ನೀವು ನಮ್ಮ ದೇಶದ ಹೆಮ್ಮೆ. ನಮ್ಮ ಸ್ವಾತಂತ್ರ್ಯದ ರಕ್ಷಕರು. ನೀವು ಸದಾ ಎಚ್ಚರ ಮತ್ತು ಜಾಗೃತರಾಗಿರುತ್ತೀರಿ ಎಂಬುದನ್ನು ತಿಳಿದೇ ದೇಶದ ಜನರು ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ ಎಂದು ರಾಷ್ಟ್ರಪತಿ ಟ್ವೀಟರ್‍ನಲ್ಲಿ ಬಣ್ಣಿಸಿದ್ದಾರೆ.

ದೇಶಸೇವೆಗಾಗಿ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ ಸೇನಾ ಸಿಬ್ಬಂದಿಗೆ ನಮಿಸಿರುವ ಮೋದಿ, ಭಾರತೀಯ ಸೇನೆ ಬಗ್ಗೆ ಪ್ರತಿಯೊಬ್ಬ ನಾಗರಿಕರಿಗೂ ಅಚಲ ನಂಬಿಕೆ ಮತ್ತು ವಿಶ್ವಾಸ ಇದೆ ಎಂದು ಟ್ವೀಟ್ ಮಾಡಿದ್ದಾರೆ.  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಮೊದಲಾದ ಗಣ್ಯರು ಸೇನಾ ದಿನದ ಅಂಗವಾಗಿ ಯೋಧರಿಗೆ ಶುಭ ಕೋರಿದ್ದಾರೆ. 1949ರ ಜನವರಿ 15ರಂದು ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಪ್ರಥಮ ಮಹಾ ದಂಡನಾಯಕರಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಅಧಿಕಾರ ಗ್ರಹಣ ಮಾಡಿದರು. ಅಂದಿನಿಂದ ಪ್ರತಿ ವರ್ಷ ಜನವರಿ 15ರಂದು ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ.

Facebook Comments

Sri Raghav

Admin