ಸೇನಾ ಶಿಬಿರದ ಮೇಲೆ ಕಾರ್ ಬಾಂಬ್ ದಾಳಿ : 80ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Car-Bombing

ಅಡೆನ್, ಆ.29- ಯೆಮೆನ್ ಮತ್ತು ಇರಾಕ್‌ನಲ್ಲಿ ನಡೆದ ಎರಡು ಭೀಕರ ಆತ್ಮಹತ್ಯಾ ದಾಳಿಯಲ್ಲಿ 80ಕ್ಕೂ ಹೆಚ್ಚು ಮಂದಿ ಮೃತಪಟ್ಟು , ಅನೇಕರು ಗಾಯಗೊಂಡಿ ದ್ದಾರೆ.  ಯೆಮೆನ್‌ನ ಅಡೆ ನ್ ನಗರದ ಸೇನಾ ತರಬೇತಿ ಶಿಬಿರದ ಮೇಲೆ ಇಂದು ಬೆಳಗ್ಗೆ ನಡೆದ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ 60 ಮಂದಿ ಹಾಗೂ ಇರಾಕ್‌ನ ಐನ್ ಅಲ್ ಟಮರ್ ಪಟ್ಟಣದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 20 ಜನ ಹತರಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಚಿಂತಾಜನಕ ವಾಗಿದ್ದು, ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಾ ಗುವ ಆತಂಕವಿದೆ ಎಂದು ಭದ್ರತಾ ಪಡೆ ಅಕಾರಿಗಳು ತಿಳಿಸಿದ್ದಾರೆ. ಅಡೆನ್‌ನ ಅಲ್-ವಲಿ ಆಸ್ಪತ್ರೆಯಲ್ಲಿ ಅನೇಕರು ತೀವ್ರ ಗಾಯಗಳೊಂದಿಗೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಯೆಮೆನ್‌ನ ಎರಡನೆ ಅತಿ ದೊಡ್ಡ ನಗರವಾದ ಅಡೆನ್‌ನ ಶಿಬಿರದಲ್ಲಿ ಯೆಮೆನಿ ಸೇನೆಗೆ ನೇಮಕಾತಿಗಾಗಿ ಅನೇಕ ಮಂದಿ ಸೇರಿದ್ದರು. ಈ ಸಂದರ್ಭದಲ್ಲಿ ಆತ್ಮಹತ್ಯಾ ಕಾರ್‌ಬಾಂಬ್ ದಾಳಿ ನಡೆಯಿತು. ಸೋಟದಿಂದ ಕನಿಷ್ಠ 80ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡರು. ಇರಾಕ್‌ನ ಓಯಾಸಿಸ್ ನಗರವಾದ ಐನ್ ಅಲ್ ಟಮರ್ ಪಟ್ಟಣದಲ್ಲಿ ಶಸ್ತ್ರ ಸಜ್ಜಿತ ಐವರು ಮಾನವ ಬಾಂಬ್ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಹತರಾಗಿದ್ದಾರೆ. ಅನೇಕರು ತೀವ್ರ ಗಾಯಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin