ಸೇಲ್ಸ್ ಮೆನ್ ಅಡ್ಡಗಟ್ಟಿ, ಚಾಕು ಇರಿದು 50 ಸಾವಿರ ರೂ. ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

Robbery--01

ಬೆಂಗಳೂರು, ಏ.6-ಅಂಗಡಿಗಳಿಗೆ ಸಾಮಾನುಗಳನ್ನು ಹಾಕಿ ಟಿವಿಎಸ್‍ನಲ್ಲಿ ತೆರಳುತ್ತಿದ್ದ ಸೇಲ್ಸ್‍ಮನ್‍ನನ್ನು ಹಾಡಹಗಲೇ ಅಡ್ಡಗಟ್ಟಿದ ನಾಲ್ವರು ದರೋಡೆಕೋರರು ಚಾಕುವಿನಿಂದ ಇರಿದು 50 ಸಾವಿರ ಹಣವಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಧುಸೂದನ್ ಎಂಬುವರೇ ದರೋಡೆಕೋರರಿಂದ ಇರಿತಕ್ಕೊಳಗಾಗಿರುವ ಸೇಲ್ಸ್‍ಮನ್.

ತಮ್ಮ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಮಧುಸೂದನ್ ಅವರು ಸಿಗರೇಟ್ ಪ್ಯಾಕ್‍ಗಳನ್ನು ತೆಗೆದುಕೊಂಡು ವಿವಿಧ ಅಂಗಡಿಗಳಿಗೆ ಹಾಕಿ ಹಣ ಸಂಗ್ರಹಿಸುತ್ತಾರೆ. ಅದರಂತೆ ನಿನ್ನೆ ಮಧ್ಯಾಹ್ನ 3.30ರಲ್ಲಿ ಹೊಂಗಸಂದ್ರದ ಅಂಗಡಿಗೆ ಸಿಗರೇಟ್ ಪ್ಯಾಕೆಟ್‍ಗಳನ್ನು ಹಾಕಿ ಹೋಗುತ್ತಿದ್ದಾಗ ನಾಲ್ವರು ದರೋಡೆಕೋರರು 2 ಬೈಕ್‍ಗಳಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದ್ದಾರೆ.ಒಬ್ಬಾತ ಬೈಕ್‍ನಿಂದ ಇಳಿದು ಮಧುಸೂದನ್ ಅವರ ಕೈಗೆ ಚಾಕುವಿನಿಂದ ಇರಿದು ಗಾಯಗೊಳಿಸಿ 50 ಸಾವಿರ ಹಣವಿದ್ದ ಬ್ಯಾಗನ್ನು ಕಿತ್ತುಕೊಂಡು ತನ್ನ ಸಹಚರರೊಂದಿಗೆ ಬೈಕ್ ಹತ್ತಿ ಪರಾರಿಯಾಗಿದ್ದಾನೆ. ಇರಿತದಿಂದ ಗಾಯಗೊಂಡ ಮಧುಸೂದನ್ ಆಸ್ಪತ್ರೆಗೆ ತೆರಳಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ನಂತರ ಬೇಗೂರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin