‘ಸೈಕಲ್’ಗಾಗಿ ಮುಂದುವರೆದ ಅಪ್ಪ-ಮಗನ ಕಿತ್ತಾಟ

ಈ ಸುದ್ದಿಯನ್ನು ಶೇರ್ ಮಾಡಿ

Cycle-01

ಲಕ್ನೋ.ಜ.03 : ಸಮಾಜವಾದಿ ಪಾರ್ಟಿ ಪರಮೊಚ್ಛ ನಾಯಕ ಮುಲಯಾಂ ಸಿಂಗ್ ಯಾದವ್ ಹಾಗೂ ಪುತ್ರ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಡುವೆ ನಡೆಯುತ್ತಿರುವ ಪಕ್ಷದ ಚಿಹ್ನೆ ಸೈಕಲ್‍ನ ಚೆಂಡು ಇದೀಗ ಚುನಾವವಾ ಆಯೋಗದ ಅಂಗಳಕ್ಕೆ ತಲುಪಿದೆ. ಹೀಗಾಗಿ ಸಮಾಜವಾದಿ ಪಕ್ಷದ ಚಿಹ್ನೆ ಯಾರಿಗೆ ದಕ್ಕಲಿದೆ ಎಂಬ ಕುತೂಹಲ ಮೂಡಿಸಿದೆ. ಸಿಎಂ ಅಖಿಲೇಶ್ ಯಾದವ್ ಅವರು ಇಂದು ಲಕ್ನೋದಲ್ಲಿರುವ ಅಪ್ಪನ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಲಾಯಂ ಸಿಂಗ್ ಅವರು ಪಕ್ಷದಿಂದ ವಜಾ ಆದ ಹಿರಿಯ ಮುಖಂಡ ಅಮರ್ ಸಿಂಗ್ ಜೊತೆ ಮಹತ್ವ ಮಾತುಕತೆ ನಡೆಸಿದ್ದಲ್ಲದೆ, ಶತಾಯ ಗತಾಯ ಪಕ್ಷದ ಚಿಹ್ನೆಯನ್ನು ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಮುಲಾಯಂ ನಿನ್ನೆ ದೆಹಲಿ ತೆರಳಿ ಅರ್ಜಿ ಸಲ್ಲಿಸಿ ಇಂದು ಲಕ್ನೋ ಬಂದಿದ್ದಾರೆ. ಅಖಿಲೇಶ್ ಜೊತೆ ಅವರು ಮಾತುಕತೆ ನಡೆಸುತ್ತಾರೆ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ. ಮುಂದಿನ ಎರಡು ದಿನಗಳಗೊಳಗೆ ಚಿಹ್ನೆ ಯಾರಿಗೆ ದಕ್ಕಲಿದೆ ಎಂಬ ಸ್ಪಷ್ಟ ಉತ್ತರ ಕೂಡ ಸಿಗಲಿದೆ.

ಮುಂಬರುವ ವಿಧಾನಸಬೆ ಚುನಾವಣೆ ಸಿದ್ಧತೆ ಹಿನ್ನಲೆಯಲ್ಲಿ ಸಿಎಂ ಅಖಿಲೇಶ್ ಪರ್ಯಾಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದಕ್ಕೆ ಮುಲಾಯಂ ಸಿಂಗ್ ಯಾದವ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಹೈಡ್ರಾಮ ನಡುವೆ ಅಪ್ಪ ಹಾಗೂ ಮಗನ ಕಿತ್ತಾಟ ಪಕ್ಷದ ಚಿಹ್ನೆಯನ್ನು ಉಳಿಸಿಕೊಳ್ಳುವ ತನಕ ಬಂದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin