ಸೈಕಲ್ ಪ್ಯೂರ್ ಅಗರಬತ್ತಿ ಮಾದರಿಯನ್ನು ಪರಿಶೀಲಿಸಿದ ಮಹಾರಾಷ್ಟ್ರ ಸಚಿವರ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

cycle
ಮೈಸೂರು, ನ.20-ನಗರದ ಎನ್.ಆರ್.ಸಮೂಹದ ಒಡೆತನದಲ್ಲಿರುವ ಧೂಪದ್ರವ್ಯ ಉತ್ಪಾದಕರಾಗಿರುವ ಸೈಕಲ್ ಪ್ಯೂರ್ ಅಗರಬತ್ತೀಸ್ ಕಾರ್ಖಾನೆಗೆ ಮಹಾರಾಷ್ಟ್ರ ಸರ್ಕಾರದ ಸಚಿವರು ಭೇಟಿ ನೀಡಿ ಉತ್ಪಾದನಾ ಮಾದರಿ ಮತ್ತು ತಂತ್ರಜ್ಞಾನ ಕುರಿತು ಮಾಹಿತಿ ಪಡೆದುಕೊಂಡರು. ಹಣಕಾಸು ಸಚಿವ ಸುಧೀರ್ ಮುಂಗಂತಿವಾರ್, ಕೃಷಿ ಸಚಿವ ಪಾಂಡುರಂಗ್ ಫುಂಡ್ಕರ್, ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜ ಮುಂಡೆ, ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಮದನ್ ಯೆರಾವರ್, ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ದೀಪಕ್ ಕೇಸರ್ಕರ್ ಅವರನ್ನೊಳಗೊಂಡ ತಂಡ ಮಹಾರಾಷ್ಟ್ರದಿಂದ ಮೈಸೂರಿಗೆ ಆಗಮಿಸಿತ್ತು.

ಸೈಕಲ್ ಪ್ಯೂರ್ ಅಗರಬತ್ತೀಸ್ ಸಂಸ್ಥೆಯಲ್ಲಿ ಅನುಸರಿಸುತ್ತಿರುವ/ಅನುಷ್ಠಾನಗೊಳಿಸುತ್ತಿರುವ ಬ್ಯಾಕೆಂಡ್ ತಾಂತ್ರಿಕತೆಗಳು, ಉದ್ಯೋಗದ ಮಾದರಿ ಮತ್ತು ಅಗರಬತ್ತಿ ಉತ್ಪಾದನಾ ಪ್ರಕ್ರಿಯೆ, ಗಡ್‍ಚಿರೋಲಿ ಜಿಲ್ಲೆಯ ಗಡ್‍ಚಿರೋಲಿ ಅಗರಬತ್ತಿ ಯೋಜನೆಯಲ್ಲಿ ಇದೇ ಮಾದರಿಯನ್ನು ಅನುಸರಿಸಲು ಮತ್ತು ಪುನರಾವರ್ತಿಸಲು ಸಾಧ್ಯವೇ ಎನ್ನುವುದನ್ನು ತಿಳಿದುಕೊಳ್ಳುವುದು ಹಿನ್ನೆಲೆಯಲ್ಲಿ ಈ ಭೇಟಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಸೈಕಲ್ ಪ್ಯೂರ್ ಅಗರಬತ್ತೀಸ್ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ಷ್ಮ ಉದ್ಯಮಶೀಲತೆ ಮತ್ತು ಮಹಿಳಾ ಸಬಲೀಕರಣವನ್ನು ದೊಡ್ಡ ವಿಭಾಗದಲ್ಲಿ ಪ್ರೋತ್ಸಾಹಿಸಿ ಸಂಸ್ಥೆಯು ಸುಮಾರು 55 ಸಾವಿರ ಮಹಿಳೆಯರಿಗೆ ಮೂಲ ಮಟ್ಟದಲ್ಲಿ ಕೆಲಸವನ್ನು ಒದಗಿಸಿದೆ.

ಪ್ರಸ್ತುತ ಮಹಾರಾಷ್ಟ್ರದ ಗಡ್‍ಚಿರೋಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡ್‍ಚಿರೋಲಿ ಅಗರಬತ್ತಿ ಪ್ರಾಜೆಕ್ಟ್ (ಜಿಎಪಿ) ಯೋಜನೆಯೊಂದಿಗೆ ಈ ಸಂಸ್ಥೆಯು ಸಹಭಾಗಿತ್ವ ಹೊಂದಿದೆ. ಪ್ರಸ್ತುತ ಈ ಯೋಜನೆಯು ಸುಮಾರು 1200 ಫಲಾನುಭವಿಗಳ ಆದಾಯದ ಮುಖ್ಯ ಮೂಲಗಳಲ್ಲಿ ಒಂದಾಗಿದೆ. ಯೋಜನೆಯ ಕುರಿತು ಮಾತನಾಡಿದ ಸೈಕಲ್ ಪ್ಯೂರ್ ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ, ನಮ್ಮ ಉತ್ಪಾದನಾ ಘಟಕಗಳಿಗೆ ಸಚಿವರನ್ನ್ನು ಕರೆದುಕೊಂಡು ಹೋಗಿ, ಅದರ ಹಿಂದಿರುವ ಯಾಂತ್ರಿಕ ವ್ಯವಸ್ಥೆಯನ್ನು ಅವರಿಗೆ ತೋರಿಸಿದ್ದು ನಮಗೆ ಸಂತಸವನ್ನುಂಟು ಮಾಡಿದೆ ಎಂದರು.

Facebook Comments

Sri Raghav

Admin