ಸೈನಾ ನೆಹ್ವಾಲ್‍ನೆಹ್ವಾಲ್ ಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

saina

ಬೆಂಗಳೂರು, ಅ.26- ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ, ಕೈರಾದ ರಾಯಭಾರಿ ಸೈನಾ ನೆಹ್ವಾಲ್, ಐಒಸಿಯ ಅಥ್ಲೀಟ್ಸ್ ಆಯೋಗದ ಸದಸ್ಯರಾಗಿ ನೇಮಕಗೊಂಡಿರುವುದಕ್ಕೆ ಕೈರಾ ನಿರ್ದೇಶಕರಾದ ಕರಿಷ್ಮಾ ಮಂಗ್ಲಾನಿ ಸನ್ಮಾನಿಸಿ, ರಾಷ್ಟ್ರಕ್ಕೆ ಮತ್ತಷ್ಟು ಕೀರ್ತಿ ತರುವಂತೆ ಹಾರೈಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸೈನಾ, ಶೀಘ್ರದಲ್ಲೇ ಮತ್ತಷ್ಟು ಉತ್ತಮ ಪ್ರದರ್ಶನ ತೋರಿ ಮೈದಾನಕ್ಕೆ ಹಿಂದಿರುಗುವ ಆಶ್ವಾಸನೆ ನೀಡಿದರು. ಈಗಾಗಲೇ ತರಬೇತಿ ಪ್ರಾರಂಭಿಸಿರುವ ತಾವು ಆದಷ್ಟು ಬೇಗ ದೈಹಿಕ ಕ್ಷಮತೆ ಹೊಂದುವ ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸೈನಾ, ಐಒಸಿ ಅಥ್ಲೀಟ್ಸ್ ಆಯೋಗದ ಸದಸ್ಯೆಯಾಗಿ ನೇಮಕಗೊಂಡಿರುವುದು ನನಗೆ ಸಂದ ಗೌರವ, ಸಂತೋಷವಾಗಿದೆ. ಇದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಜವಾಬ್ದಾರಿಯನ್ನು ನಿರ್ವಹಿಸಲು ನಾನು ಶ್ರಮಿಸುತ್ತೇನೆ ಎಂದರು.
ಕೈರಾ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಮಂಗ್ಲಾನಿ ಸೈನಾ ನೆಹವಾಲ್‍ಗೆ ಶುಭ ಹಾರೈಸಿದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin