ಸೈನಾ ನೆಹ್ವಾಲ್ ಮತ್ತೊಂದು ಸಾಧನೆ
ಈ ಸುದ್ದಿಯನ್ನು ಶೇರ್ ಮಾಡಿ
ಹೈದ್ರಾಬಾದ್, ಫೆ.26- ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ರ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಕಳೆದ ವರ್ಷವಷ್ಟೇ ಒಲಿಂಪಿಕ್ಸ್ ಕಮಿಟಿಯ ಅಥ್ಲೆಟಿಕ್ಸ್ ಸದಸ್ಯೆಯಾಗಿ ಆಯ್ಕೆಗೊಂಡಿದ್ದ ಸೈನಾ ಈಗ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ (ಬಿಡಬ್ಲ್ಯುಎಫ್)ನಲ್ಲೂ ಸದಸ್ಯೆಯಾಗಿ ಸ್ಥಾನ ಪಡೆದಿದ್ದಾಳೆ. ಭಾರತೀಯ ಕ್ರೀಡಾಪಟು ಒಬ್ಬರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಆಯೋಗದಲ್ಲಿ ಸ್ಥಾನಮಾನ ಪಡೆದಿರುವುದು ಇದೇ ಮೊದಲು. ವಿಶ್ವದ ಟಾಪ್ 10 ಆಟಗಾರ್ತಿ ಯಾಗಿರುವ ಸೈನಾ ರಿಯೊ ಒಲಿಂಪಿಕ್ಸ್ ವೇಳೆ ಗಾಯಾಳುವಾಗಿದ್ದರು. ಆದರೆ ಕಳೆದ ತಿಂಗಳು ನಡೆದ ಮಲೇಷಿಯಾ ಮಾಸ್ಟರ್ಸ್ ಗ್ರ್ಯಾಂಡ್ ಪ್ರಿಕ್ಸ್ ವಿಭಾಗದಲ್ಲಿ ಪ್ರತಿನಿಧಿಸಿ ಚಿನ್ನದ ಪ್ರಶಸ್ತಿಗೆ ಭಾಜನರಾಗಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments