ಸೈನಿಕರಿಗೆ ದೀಪಾವಳಿ ಶುಭಾಶಯ ಕೋರಿದ ವಿರಾಟ್ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

ವಿಶಾಖಪಟ್ಟಣ, ಅ.30-ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರತೀಯ ಯೋಧರಿಗೆ ಟ್ವೀಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ.  ರಾತ್ರಿ-ಹಗಲು ಎನ್ನದೆ ದೇಶದ ಗಡಿ ಕಾಯುತ್ತೀರಿ, ಎಂಥ ಪರಿಸ್ಥಿತಿ ಇದ್ದರೂ ಪ್ರಾಣವನ್ನು ಲೆಕ್ಕಿಸದೆ ದೇಶ ಕಾಯುವ ನಿಮಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಕುಟುಂಬದವರಿಂದ ದೂರ ಇರುವುದು ಎಷ್ಟು ಕಷ್ಟ ಎಂಬುದು ನನಗೆ ಗೊತ್ತು ಎಂದಿರುವ ಕೊಹ್ಲಿ ಟ್ವೀಟರ್‍ನಲ್ಲಿ ವಿಡಿಯೋ ಸಂದೇಶದ ಮೂಲಕ ಸೈನಿಕರಿಗೆ ಶುಭ ಹಾರೈಸಿದ್ದಾರೆ.

ದೇಶದ ಹೆಮ್ಮೆಯ ಸೈನಿಕರು ಕಂಡಾಗ ಪ್ರತಿಯೊಬ್ಬರು ಸಲಾಂ ಹೊಡೆಯಿರಿ. ಇಂದು ನಾವೆಲ್ಲ ನೆಮ್ಮದಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಸೈನಿಕರೇ ಕಾರಣ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ವಿರಾಟ್ ಕೊಹ್ಲಿ ಅಲ್ಲದೆ ವಿರೇಂದ್ರ ಸೆಹ್ವಾಗ್ ಸೇರಿದಂತೆ ಸ್ಟಾರ್ ಆಟಗಾರರು ಸೈನಿಕತೆ ದೀಪಾವಳಿ ಹಬ್ಬದ ಶುಭಾಷಯ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin