ಸೈನಿಕರ ಸಮಾಧಿ ಸ್ಥಳ ಶುಚಿತ್ವಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

pandavapura5

ಪಾಂಡವಪುರ, ಸೆ.12- ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ ದೇಶದ ಪ್ರಥಮ ಸ್ವಾತಂತ್ರ್ಯ ಸೇನಾನಿ ಟಿಪ್ಪುಸುಲ್ತಾನ್ ಅವರಿಗೆ ಯುದ್ಧದಲ್ಲಿ ಸಹಾಯ ಮಾಡಲು ಬಂದು ಮೃತಪಟ್ಟ ಫ್ರೆಂಚ್ ಸೈನಿಕರ ಸಮಾಧಿ ಸ್ಥಳದ ಸ್ವಚ್ಛತಗೆ ಇಲ್ಲಿನ ಸ್ವರ್ಗಾರೋಹಣ ಮಾತೆಯ ದೇವಾಲಯದ ಒಂದನೇ ಸ್ವಾಮಿ ಫಾದರ್ ಟಿ.ವಿನ್ಸೆಂಟ್ ಮತ್ತು ರಾಜ್ಯ ಮೀನುಗಾರಿಕೆ ಮಹಾ ಮಂಡಳದ ನಿರ್ದೇಶಕ ಜೆ.ಸಗಾಯಂ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.ಪಟ್ಟಣದ ಹಾರೋಹಳ್ಳಿ ಬಡಾವಣೆಯ ಸಮೀಪ ಇದ್ದ ಸಮಾಧಿ ಸ್ಥಳಕ್ಕೆ ಆಗಮಿಸಿದ ಸಮುದಾಯದ ಮುಖಂಡರು ಸಮಾಧಿ ಸ್ಥಳದಲ್ಲಿ ಕಳೆದ ಹಲವಾರು ದಿನಗಳಿಂದ ಕಸ ಮತ್ತು ಕಳೆ ತುಂಬಿಕೊಂಡಿದ್ದರಿಂದ ಅದನ್ನು ಶುಚಿಗೊಳಿಸಿದರು.

ನಂತರ ಮಾತನಾಡಿದ ಫಾದರ್ ಜೆ.ವಿನ್ಸೆಂಟ್, ಸಮಾಧಿ ಸ್ಥಳ ಅತ್ಯಂತ ಪೂಜನೀಯವಾದುದು, ಇದನ್ನು ಶುಚಿಯಾಗಿಡಬೇಕಾದುದು ಸಮಾಜದ ಕರ್ತವ್ಯ ಎಂದರು.ರಾಜ್ಯ ಮೀನುಗಾರಿಕೆ ಮಹಾಮಂಡಳದ ನಿರ್ದೇಶಕ ಜೆ.ಸಗಾಯಂ ಮಾತನಾಡಿ, ಈಗಾಗಲೇ ಸಮುದಾರದ ಮುಖಂಡರ ನೆರವಿನೊಂದಿಗೆ ಚರ್ಚ್‍ನ ಸರ್ವತೋಮುಖ ಬೆಳವಣಿಗೆಗಳು ಆಗಿದ್ದು, ಫಾದರ್ ಜೆ.ವಿನ್ಸೆಂಟ್ ನೇತೃತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.ರೂಬನ್ ಮನೋಹರ್, ಅಂತೋಣಿರಾಜ್ ರಾಬರ್ಟ್, ಆರೋಗ್ಯನಾಥನ್, ಆಲ್ಬರ್ಟ್, ಅಂತೋಣಿರಾಜ್, ಯೇಸುನಾಥ್, ಜಾನ್, ಎಸ್.ಎ.ಅಂತೋಣಿ, ರಿಚರ್ಡ್ ಲೂಯೀಸ್, ಬಾಲರಾಜ್ ಮುಂತಾದವರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin