ಸೈಫ್ ಅಲಿಖಾನ್ ಮತ್ತು ಐವರು ಮಹಿಳೆಯರು…

ಈ ಸುದ್ದಿಯನ್ನು ಶೇರ್ ಮಾಡಿ

Saif

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಎಂಬ ಮಾತು ಬಾಲಿವುಡ್ ನಟ ಸೈಫ್ ಅಲಿಖಾನ್ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ. ಖ್ಯಾತ ಕ್ರಿಕೆಟಿಗ ಮನ್ಸೂರ್ ಅಲಿಖಾನ್ ಪಟೌಡಿ ಮತ್ತು ಹಿರಿಯ ಅಭಿನೇತ್ರಿ ಶರ್ಮಿಳಾ ಟಾಗೋರ್ ಪುತ್ರನಾದ ಸೈಫ್ ತನ್ನ ಬದುಕಿನ ಮೇಲೆ ಐವರು ಪ್ರಭಾವ ಬೀರಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.  ಸೈಫ್ ಸಹಜವಾಗಿಯೇ ತಾಯಿಗೆ ತಕ್ಕ ಮಗ. ಮೊದಲಿಗೆ ತನ್ನ ಜೀವನದ ಯಶಸ್ಸಿಗೆ ತುಂಬ ಪ್ರಭಾವ ಬೀರಿದ್ದು ತಾಯಿ ಶರ್ಮಿಳಾ ಎಂದು ಹೇಳಿಕೊಂಡಿದ್ದಾನೆ. ನನ್ನ ಪ್ರತಿ ತಪ್ಪು, ಲೋಪದೋಷಗಳನ್ನು ತಿದ್ದಿ ಮಾರ್ಗದರ್ಶನ ನೀಡಿದ ಮದರ್ ನನ್ನ ಗುರು, ಹಿತೈಷಿ, ಮಾರ್ಗದರ್ಶಿ ಎಂದು ಸೈಫ್ ಗರಿಷ್ಠ ಅಂಕ ನೀಡಿದ್ದಾನೆ.  ಎರಡನೆ ಸ್ಥಾನದಲ್ಲಿರುವವರು- ಅಮೃತಾ ಸಿಂಗ್. ಸೈಫ್ನನ್ನು ಮದುವೆಯಾಗುವಾಗ ಅಮೃತಾ ದೊಡ್ಡ ಸ್ಟಾರ್ ಆಗಿದ್ದರು. ಚಿತ್ರರಂಗದ ವೃತ್ತಿ ಬದುಕಿನ ಏರಿಳಿತದಲ್ಲಿ ಜತೆಯಾಗಿ ಸಂತೈಸಿದ್ದರು.

ಸೈಫ್ ಮೂರನೇ ಪ್ರಭಾವಿ ಮಹಿಳೆ ಸ್ಥಾನವನ್ನು ಮೋಹಕ ಬೆಡಗಿ ಕರೀನಾ ಕಪೂರ್ಗೆ ನೀಡಿದ್ದಾನೆ. ತನಗಿಂತ ಚಿಕ್ಕವಳಾದ ಕರೀನಾಳನ್ನು ವರಿಸಿದ ಸೈಫ್ಗೆ ಅನೇಕರು ‘ನೀ ಮಾಡಿದ್ದು ಸರೀನಾ?’ ಎಂದು ಪ್ರಶ್ನಿಸಿದ್ದೂ ಉಂಟು. ಆಕೆ ನನ್ನ ಲೈಫ್ನ ಅತ್ಯುತ್ತಮ ಪಾರ್ಟನರ್ ಎಂದು ಸೈಫ್ ಬೇಗಂ ಕರೀನಾ ಕಪೂರ್ ಖಾನ್ಳನ್ನು ಹಾಡಿ ಹೊಗಳಿದ್ದಾನೆ.  ನಾಲ್ಕನೆ ಸ್ಥಾನದಲ್ಲಿ ಸೈಫ್ನ ಡಾರ್ಲಿಂಗ್ ಸಿಸ್ಟರ್ ಸೋಹಾ ಅಲಿಖಾನ್ ಇದ್ದಾಳೆ. ಈ ತುಂಟು ಹುಡುಗಿ ಪ್ರೇರಕ ಶಕ್ತಿ. ಇನ್ನೂ ಐದನೆ ಪ್ಲೇಸ್ನಲ್ಲಿದ್ದಾಳೆ ಪುತ್ರಿ ಸಾರಾಖಾನ್. ಮಗಳ ಕಂಡರೆ ಸೈಫ್ಗೆ ಪಂಚಪ್ರಾಣ.
ಸೈಫ್ ಅಲಿಖಾನ್ ಮತ್ತು ಐವರು ಮಹಿಳೆಯರು…

Facebook Comments

Sri Raghav

Admin