ಸೊಮಾಲಿಯಾದಲ್ಲಿ ಉಗ್ರರ ದಾಳಿಗೆ 17ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

17-Killed

ಇಸ್ತಾನ್ಬುಲ್,ಆ.26- ಟರ್ಕಿ ಮತ್ತು ಸೊಮಾಲಿಯಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಕನಿಷ್ಠ 17 ಮಂದಿ ಬಲಿಯಾಗಿ ಅನೇಕರು ಗಾಯಗೊಂಡಿದ್ದಾರೆ.   ಟರ್ಕಿಯ ಈಶಾನ್ಯ ಭಾಗದಲ್ಲಿರುವ ಪೊಲೀಸ್ ಕೇಂದ್ರ ಕಚೇರಿ ಹೊರಗೆ ಕುರ್ದಿಸ್ತಾನ ವರ್ಕರ್ಸ್ ಪಾರ್ಟಿ(ಪಿಕೆಕೆ) ಉಗ್ರರು ಇಂದು ಕಾರ್ಬಾಂಬ್ ಸ್ಫೋಟಿಸಿದಾಗ ಎಂಟು ಪೊಲೀಸ್ ಅಧಿಕಾರಿಗಳು ಮೃತಪಟ್ಟು ಇತರ 45ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಸಿಜ್ರೆಯಲ್ಲಿರುವ ವಿಶೇಷ ಗಲಭೆ ಪ್ರತಿರೋಧ ಪೊಲೀಸ್ ಪಡೆಯ ಕೇಂದ್ರ ಕಚೇರಿ ಕಾರ್ ಬಾಂಬ್ ದಾಳಿಯಿಂದ ತೀವ್ರ ಹಾನಿಗೀಡಾಗಿದೆ.  ಮೊಗಡಿಶು ವರದಿ: ಸೊಮಾಲಿಯಾ ರಾಜಧಾನಿ ಮೊಗಡಿಶುವಿನ ಕಡಲ ಕಿನಾರೆಯ ರೆಸ್ಟೋರೆಂಟ್ ಮೇಲೆ ಶಾಬಾಬ್ ಜಿಹಾದಿಗಳು ನಿನ್ನೆ ನಡೆಸಿದ ಆಕ್ರಮಣದಲ್ಲಿ ಏಳು ಮಂದಿ ಹತರಾಗಿ ಅನೇಕರು ಗಾಯಗೊಂಡಿದ್ದಾರೆ.  ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಲ್-ಕೈದಾ ಉಗ್ರಗಾಮಿ ಸಂಘಟನೆಗೆ ಸೇರಿದ್ದು ಇಬ್ಬರು ಶಾಬಾಬ್ ಜಿಹಾದಿಗಳೂ ಕೊಲ್ಲಲ್ಪಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin