ಸೊಳ್ಳೆ ನಿಯಂತ್ರಣಕ್ಕೆ ಸಹಕಾರ ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

 

kr--pete

ಕೆ.ಆರ್.ಪೇಟೆ, ಆ.15- ಉತ್ತಮ ಆರೋಗ್ಯಕ್ಕೆ ಸೊಳ್ಳೆ ನಿಯಂತ್ರಿತ ಪರಿಸರ ಅತಿಮುಖ್ಯ. ಆರೋಗ್ಯ ಇಲಾಖೆಯ ವತಿಯಿಂದ ಕೈಗೊಳ್ಳುತ್ತಿರುವ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಸೋಮನಹಳ್ಳಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗುರುಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.ಸೋಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಯೋಜಿಸಿದ್ದ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯಾ, ಮೆದಳು ಜ್ವರ, ಆನೆಕಾಲು ರೋಗಗಳಂತಹ ಕಾಯಿಲೆಗಳಿಗೆ ಸೊಳ್ಳೆಗಳೇ ಪ್ರಮುಖ ವಾಹಕಗಳು. ಮಾನವ ಬದುಕನ್ನು ಹಿಂಡುವ ಕಾಯಿಲೆಗಳಿಂದ ಮುಕ್ತರಾಗಬೇಕಾದರೆ ಸೊಳ್ಳೆ ಮುಕ್ತ ಪರಿಸರವನ್ನು ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.ಞಸೊಳ್ಳೆಗಳು ಉತ್ಪತ್ತಿಯಾಗಬಹುದಾದ ತಾತ್ಕಾಲಿಕ ನೀರಿನ ತಾಣಗಳು, ಅಲಂಕಾರಿಕ ತೊಟ್ಟಿಗಳು, ಕಾರಂಜಿಗಳು, ಮನೆಯ ಆವರಣದಲ್ಲಿರುವ ಸಿಮೆಂಟ್ ತೊಟ್ಟಿಗಳು, ಮನೆಯ ಹೊರಾಂಗಣ ಸೇರಿದಂತೆ ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸಬೇಕೆಂದು ಕರೆ ನೀಡಿದರು.
ಗ್ರಾ.ಪಂ ಸದಸ್ಯ ಕೇಶವ, ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞರಾದ ಕೆ.ಕೆ.ರತ್ನಕುಮಾರಿ, ಮೇಲ್ವಿಚಾರಕರಾದ ಎಂ.ಎಸ್.ಸೋಮಶೇಖರ್, ಸಲೀಂಪಾಷ, ಎಂ ಸಂದೀಪ್ ಭಾಗವಃಇಸಿ ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯಾ, ಮೆಧುಳುಜ್ವರ ಹಾಗೂ ಆನೆಕಾಲು ರೋಗ ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಪಿ.ಡಿ.ಓ ಚಂದ್ರಶೇಖರ್, ಕಾರ್ಯದರ್ಶಿ ಶೀಳನೆರೆ ಯೋಗೀಶ್, ಹಿರಿಯ ಆರೋಗ್ಯ ಸಹಾಯಕ ಧಮೇಂದ್ರ, ಮೇಲ್ವಿಚಾರಕ ಎಸ್.ಎಲ್. ಸತೀಶ್, ಆರೋಗ್ಯ ಸಹಾಯಕ ಪ್ರಶಾಂತ್ ಭಾಗವಹಿಸಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin