ಸೊಳ್ಳೆ ಹಾವಳಿ : ಬಾಲಿವುಡ್ ನಟ ಶಾಹಿದ್‍ ಕಪೂರ್‍ಗೆ ಮುಂಬೈ ಪಾಲಿಕೆಯಿಂದ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Shahid-Kapoor

ಮುಂಬೈ,ಸೆ.17-ಹೆಚ್ಚುತ್ತಿರುವ ಸೊಳ್ಳೆ ಹಾವಳಿಗೂ ಬಾಲಿವುಡ್ ಖ್ಯಾತ ನಟನಿಗೂ ಏನು ಸಂಬಂಧ? ಬೃಹತ್ ಮುಂಬೈ ನಗರಪಾಲಿಕೆ ಸಿಬ್ಬಂದಿ ಸಂಬಂಧ ಕಲ್ಪಿಸಿದ್ದಾರೆ. ಮಾರಕ ಸೊಳ್ಳೆಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರೆಂಬ ಕಾರಣಕ್ಕಾಗಿ ಪಾಲಿಕೆ ಅಧಿಕಾರಿಗಳು ನಟ ಶಾಹಿದ್ ಕಪೂರ್‍ಗೆ ನೋಟಿಸ್ ಗುಜರಾಯಿಸಿದ್ದಾರೆ.   ಪಾಲಿಕೆಯ ಕೀಟ ನಿಯಂತ್ರಣ ತಂಡವು ಶಾಹಿದ್ ಮನೆಗೆ ಭೇಟಿ ನೀಡಿದಾಗ ಅಲ್ಲಿ ಸೊಳ್ಳೆಗಳ ಉಗಮ ಸ್ಥಳಗಳು ಇರುವುದು ಪತ್ತೆಯಾಗಿದ್ದು, ನಟನಿಗೆ ನೋಟಿಸ್ ಜಾರಿಗೊಳಿಸಲಾಗಿದೆ.  ಈ ಪ್ರದೇಶದ ಮನೆಗಳು ಮತ್ತು ಉದ್ಯಾನಗಳಲ್ಲಿ ನಾವು ಎಂದಿನಂತೆ ತಪಾಸಣೆ ನಡೆಸಿದೆವು. ಜುಹು ಪ್ರದೇಶದ ನಟನ ಮನೆಯನ್ನು ಪರಿಶೀಲಿಸಿದಾಗ ಅವರ ಖಾಸಗಿ ಈಜುಕೊಳದಲ್ಲಿ ಮಾರಕ ಏಡೆಸ್ ಆಗಿಪ್ಟಿ ಸೊಳ್ಳೆ ಸಂತತಿ ವೃದ್ದಿಯಾಗುತ್ತಿರುವುದು ಕಂಡು ಬಂದಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾಬಾಲನ್‍ಗೆ ಡೆಂಘಿ: ಅನಾರೋಗ್ಯದಿಂದ ಬಳಲುತ್ತಿರುವ ಬಾಲಿವುಡ್ ನಟಿ ವಿದ್ಯಾಬಾಲನ್‍ಗೆ ಡೆಂಘಿ ಇರುವುದನ್ನು ವೈದ್ಯರು ಖಚಿತಪಡಿಸಿದ್ದು, ಕೆಲವು ದಿನಗಳ ವಿಶ್ರಾಂತಿಗೆ ಸಲಹೆ ಮಾಡಿದ್ದಾರೆ. ಈ ನಡುವೆ ಪಾಲಿಕೆ ಅಧಿಕಾರಿಗಳು ವಿದ್ಯಾಬಾಲನ್ ಅವರ ಮನೆಗೆ ಭೇಟಿ ನೀಡಿ ಸೊಳ್ಳೆಗಳಿರುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಿದರು.

► Follow us on –  Facebook / Twitter  / Google+

Facebook Comments

Sri Raghav

Admin