ಸೋನಾಕ್ಷಿ ಸಿನ್ಹಾ ಪೇಂಟಿಂಗ್ ಹರಾಜು

ಈ ಸುದ್ದಿಯನ್ನು ಶೇರ್ ಮಾಡಿ

asdgshgfsdhhಬೆಂಗಳೂರು, ಆ.4-   ಇಬೇ ಇಂಡಿಯಾ, ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಅವರ, ಹೋಲ್ ಅಗೇನ್ ಪೇಂಟಿಂಗನ್ನು ಹರಾಜು ಮಾಡಲಿದೆ.   www.ebay.in/charity   ನಲ್ಲಿ ಒಂದು ವಾರದ ಕಾಲ ಈ ಹರಾಜು ನಡೆಯಲಿದೆ. ಸ್ತನ ಕ್ಯಾನ್ಸರ್ ಬಗ್ಗೆ ಜನಜಾಗ್ರತಿ ಮೂಡಿಸಲು ಪ್ರಯತ್ನಿಸುತ್ತಿರುವ ಓಗಾನ್ ಕ್ಯಾನ್ಸರ್ ಫೌಂಡೇಷನ್ ಸಹಾಯಾರ್ಥ, ಈ ಹರಾಜು ನಡೆಯುತ್ತಿದೆ.  ಸೋನಾಕ್ಷಿಯವರ ಅಭಿಮಾನಿಗಳು ಮತ್ತು ಬಾಲಿವುಡ್ ಪ್ರಿಯರು www.ebay.in/sonakshipainting  ಮೇಲೆ ಕ್ಲಿಕ್ಕಿಸಿ ಸೂಪರ್‍ಸ್ಟಾರ್ ಮಾಡಿರುವ ಪೇಂಟಿಂಗ್ ಕೊಳ್ಳಲು ಯತ್ನಿಸಬಹುದು. ಕ್ಯಾನ್ಸರ್ ಬಗ್ಗೆ ಅರಿವನ್ನು ಮೂಡಿಸಲು ಯತ್ನಿಸುತ್ತಿರುವ ಸೋನಾಕ್ಷಿಯವರ ಈ ಉದಾತ್ತ ಕೆಲಸಕ್ಕೆ ಎಲ್ಲರೂ ಕೈಜೋಡಿಸುವ ಅವಕಾಶವಿದೆ.

ಕಮ್ಯೂನಿಕೇಷನ್ಸ್ ಮುಖ್ಯಸ್ಥ  ಗಿರೀಶ್ ಹುರಿಯಾ ಮಾತನಾಡಿ, ಇಬೇ ಇಂಡಿಯಾ, ಓಗಾನ್ ಕ್ಯಾನ್ಸರ್ ಫೌಂಡೇಷನ್ ಸಹಾಯಾರ್ಥ ಹರಾಜನ್ನು ನಡೆಸುತ್ತಿರುವುದು ಬಹಳ ಸಂತೋಷದ ವಿಷಯ. ಸೋನಾಕ್ಷಿಯವರ ಪೇಂಟಿಂಗ್ ಹರಾಜಾಗುತ್ತಿರುವುದು ಮತ್ತೂ ಸಂತಸದ ಸಂಗತಿ. ನಿಧಿ ಸಂಗ್ರಹಣೆಯೊಂದಿಗೆ ಜನರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗ್ರತಿಯನ್ನೂ ಹೆಚ್ಚಿಸುತ್ತದೆ ಈ ಹರಾಜು ಪ್ರಕ್ರಿಯೆ ಎಂದರು.  ಇಬೇ ಇಂಡಿಯಾ ಬಗ್ಗೆ  ಇಬೇ ಇಂಡಿಯಾ, ಭಾರತದ ಪ್ರಮುಖ ಆನ್‍ಲೈನ್ ಮಾರುಕಟ್ಟೆ ಮತ್ತು ಶಾಪಿಂಗ್ ತಾಣವಾಗಿದೆ. ಇಲ್ಲಿ, ಸಾವಿರಾರು ಭಾರತೀಯ ವಾಣಿಜ್ಯೋದ್ಯಮಗಳು ಇಲೆಕ್ಟ್ರಾನಿಕ್ಸ್, ಲೈಫ್‍ಸ್ಟೈಲ್, ಸಂಗ್ರಹಯೋಗ್ಯವಾದವುಗಳು, ಮತ್ತು ಮಾಧ್ಯಮ ವಿಭಾಗಗಳಲ್ಲಿ 3ಕೋಟಿಗೂ ಮಿಕ್ಕಿ ಉತ್ಪನ್ನಗಳನ್ನು ಲಿಸ್ಟ್ ಮಾಡಿವೆ.  ಇಬೇ ಇಂಡಿಯಾ, ಇಬೇ ಇಂಕ್ ನ 100  ಅಧೀನ ಕಂಪನಿಯಾಗಿದೆ.
► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

 

Facebook Comments

Sri Raghav

Admin