ಸೋಮವಾರ ಸಂಪುಟ ಸಭೆ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಕುರಿತು ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Cabinet

ಬೆಂಗಳೂರು, ಮಾ.16- ರಾಜ್ಯ ಸಚಿವ ಸಂಪುಟ ಸಭೆ ಮಾ.19ರಂದು ನಡೆಯಲಿದ್ದು, ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುವ ಸಂಬಂಧ ಸುದೀರ್ಘ ಚರ್ಚೆ ನಡೆಯಲಿದೆ. ಇದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ರಾಜ್ಯದ ಎ¯್ಲÉಡೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವೇ ವರದಿ ತರಿಸಿದ್ದು, ಇದಕ್ಕೆ ಪೂರಕವಾಗಿ ಸಚಿವರು ತಮ್ಮ ತಮ್ಮ ಜಿ¯್ಲÉಗಳಲ್ಲಿ ನಡೆಸಿದ ಅಧ್ಯಯನ ವರದಿಗಳ ಜತೆ ಹೋಲಿಕೆ ಮಾಡಿ ನೋಡಲಿದ್ದಾರೆ.

ನಾನು ನಡೆಸುವ ಸರ್ವೇಯೇ ಬೇರೆ. ನೀವು ನಿಮ್ಮ ನಿಮ್ಮ ಮೂಲಗಳಿಂದ ಸರ್ವೇ ವರದಿ ತರಿಸಿಕೊಳ್ಳಿ. ಪರಸ್ಪರ ಹೋಲಿಕೆ ಮಾಡಿ ನೋಡೋಣ ಎಂದು ಮುಖ್ಯಮಂತ್ರಿಗಳು ಈ ಹಿಂದೆಯ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ. ಈ ಸೂಚನೆಯನುಸಾರ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಸಚಿವರುಗಳು ತಮ್ಮ ತಮ್ಮ ಜಿಗಳಲ್ಲಿ ಪಕ್ಷದ ಪರಿಸ್ಥಿತಿ, ಗೆಲ್ಲುವ ಕ್ಯಾಂಡಿಡೇಟ್‍ಗಳು, ಸ್ವಲ್ಪ ಬಲ ಹಾಕಿದರೆ ಗೆಲ್ಲಬಲ್ಲ ಕ್ಯಾಂಡಿಡೇಟ್‍ಗಳು, ಯಾವ ಕಾರಣಕ್ಕೂ ಗೆಲ್ಲಲಾಗದ ಕ್ಷೇತ್ರಗಳ ಪಟ್ಟಿ ತಯಾರಿಸಿಕೊಂಡಿದ್ದಾರೆ.

ಹೀಗೆ ತಾವು ತರಿಸಿಕೊಂಡ ಸರ್ವೇ ವರದಿಯ ಜತೆ ಸಚಿವರು ರೆಡಿ ಮಾಡಿಟ್ಟುಕೊಂಡ ಸರ್ವೇ ವರದಿಗಳನ್ನು ಹೋಲಿಸಿ ನೋಡಲಿರುವ ಮುಖ್ಯಮಂತ್ರಿಗಳು ಗೆದ್ದೇ ಗೆಲ್ಲುವ ಅಭ್ಯರ್ಥಿಗಳು, ಗೆಲ್ಲಬಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಥಮಿಕವಾಗಿ ಸಿದ್ಧಪಡಿಸಲಿದ್ದಾರೆ. ನಂತರ ಮಾ.26ರಂದು ನಡೆಯಲಿರುವ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಇದನ್ನು ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ಮೊದಲ ಕಂತಿನ 90 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಲು ರಾಜ್ಯ ಚುನಾವಣಾ ಸಮಿತಿಗೆ ನೆರವು ನೀಡಲಿದ್ದಾರೆ. ಈಗಾಗಲೇ ರಾಜ್ಯ ಚುನಾವಣಾ ಸಮಿತಿ ಕಳೆದ ಚುನಾವಣೆಯಲ್ಲಿ ಸೋತ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಯಾರಾಗಬೇಕು?ಎಂಬ ಕುರಿತು ಇಬ್ಬರು, ಮೂವರ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿದೆ.

ಆನಂತರ ಸಿದ್ದರಾಮಯ್ಯ ಅವರು ನೀಡುವ ಸಲಹೆ, ಪಕ್ಷ ನೀಡುವ ಸಲಹೆಗಳೆಲ್ಲವನ್ನೂ ಪರಿಗಣಿಸಿ 90 ಕ್ಷೇತ್ರಗಳ ಅಭ್ಯರ್ಥಿಗಳು ಯಾರಾಗಬೇಕು ಎಂಬ ಪಟ್ಟಿಯನ್ನು ರಾಜ್ಯ ಚುನಾವಣಾ ಸಮಿತಿ, ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಲಿದೆ. ಈ ಮಧ್ಯೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಬೇಕು ಎಂಬ ವಿಷಯದಲ್ಲಿ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲ ನಾಯಕರು ಪಟ್ಟು ಹಿಡಿದಿದ್ದು, ಅವರ ಮಾತಿಗೆ ಮುಖ್ಯಮಂತ್ರಿಗಳು ಮಣೆ ಹಾಕುವ ಲಕ್ಷಣಗಳಿವೆ ಎಂಬುದು ಮೂಲಗಳ ಹೇಳಿಕೆ.

ಯಾವ ಕಾರಣಕ್ಕಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕತೆಯ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂಬ ಕುರಿತು ತಜ್ಞರ ಜತೆ ಚರ್ಚಿಸಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವರದಿಯೊಂದನ್ನು ಸಿದ್ಧಪಡಿಸಿದ್ದು, ಇದು ಕೂಡಾ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.

Facebook Comments

Sri Raghav

Admin