ಸೋಮಾಲಿಯಾದಲ್ಲಿ ಭೀಕರ ಕ್ಷಾಮದಿಂದ 48 ಗಂಟೆಗಳಲ್ಲಿ 110ಕ್ಕೂ ಹೆಚ್ಚು ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Somalia--1
ಮೊಗದಿಶು, ಮಾ.6-ಭೀಕರ ಕ್ಷಾಮದಿಂದ ದಕ್ಷಿಣ ಸೋಮಾಲಿಯಾದಲ್ಲಿ 48 ಗಂಟೆಗಳ ಅವಧಿಯಲ್ಲಿ 110ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು ತೀವ್ರ ಅಸ್ವಸ್ಥರಾಗಿದ್ದಾರೆ. ಎರಡು ದಿನಗಳ ಅವಧಿಯಲ್ಲಿ ಬರದ ಬೇಗೆ ಮತ್ತು ಅತಿಸಾರದಿಂದಾಗಿ 110 ಮಂದಿ ಸಾವಿಗೀಡಾಗಿದ್ದಾರೆ. ಲಕ್ಷಾಂತರ ಜನರು ಮತ್ತು ಜಾನುವಾರುಗಳು ಆಹಾರ ಮತ್ತು ನೀರಿಲ್ಲದೇ ಕಂಗಾಲಾಗಿದ್ದಾರೆ. ಪರಿಸ್ಥಿತಿ ನಿಭಾಯಿಸಲು ನೆರವು ನೀಡುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ ಎಂದು ಪ್ರಧಾನಿ ಹಸನ್ ಅಲಿ ಖೈರೆ ತಿಳಿಸಿದ್ದಾರೆ.   ಹಿಂದೆಂದೂ ಕಂಡು ಕೇಳರಿಯದ ಭಯಂಕರ ಕ್ಷಾಮಕ್ಕೆ ತುತ್ತಾಗಿರುವ ಸೋಮಾಲಿಯಾದಲ್ಲಿ ಈ ವರ್ಷದ ಆರಂಭದಿಂದಲೂ ತೀವ್ರ ಆಹಾರ ಅಭಾವ ಎದುರಾಗಿದೆ.

Somalia--2

ಈ ಅವಧಿಯಲ್ಲಿ 2.75 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂಬ ಆತಂಕಕಾರಿ ಅಂಕಿ-ಅಂಶವನ್ನು ವಿಶ್ವಸಂಸ್ಥೆಯ ಮಕ್ಕಳ ರಕ್ಷಣಾ ಸಂಸ್ಥೆ ಯೂನಿಸೆಫ್ ನೀಡಿದೆ. ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವನ್ನು ಅದು ವ್ಯಕ್ತಪಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Somalia--4

Somalia--3

Facebook Comments

Sri Raghav

Admin