ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದುಮಾಡಿದ ನೈಜ ‘ಬಾಹುಬಲಿ’ ದೃಶ್ಯ

ಈ ಸುದ್ದಿಯನ್ನು ಶೇರ್ ಮಾಡಿ

Bahubali

ಹೈದರಾಬಾದ್ ಸೆ.29 : ಭಾರೀ ಮಳೆಗೆ ಆಂಧ್ರಪ್ರದೇಶ ತತ್ತರಿಸಿ ಹೋಗಿದೆ. ವರುಣನ ಆರ್ಭಟಕ್ಕೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ವಾಸಿಸಲು ಸೂರಿಲ್ಲದೆ ಜನರು ಪರದಾಡ್ತಿದ್ದಾರೆ. ಈ ನಡುವೆ 30 ವರ್ಷದ ತಂದೆಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆರು ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಾನೆ. ಈ ಸೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದುಮಾಡುತ್ತಿದ್ದು, ತೆಲುಗಿನ ಸೂಪರ್ ಹಿಟ್ ಚಿತ್ರ ಬಾಹುಬಲಿಯ ಒಂದು  ದೃಶ್ಯವನ್ನು ಹೋಲುವಂತಿದ್ದು.   ತೆಲುಗಿನ ಜನಪ್ರಿಯ ಚಿತ್ರ ‘ಬಾಹುಬಲಿ’ಯಲ್ಲಿ ಬಟ್ಟೆಯಿಂದ ಸುತ್ತಿದ ಮಗುವನ್ನು ನದಿ ನೀರಿನೊಳಗಿನಿಂದ ಕೈಯೊಂದು ಹಿಡಿದುಕೊಂಡು ಸಾಗುವ ಕ್ಕೆ ಹೋಲುವ  ಅಂಥದ್ದೇ ನೈಜ ಸಿನಿಮೀಯ ಘಟನೆ  ನಡೆದಿದೆ. ಪಂಗಿ ಸತಿಬಾಬು ಎಂಬುವವರು ತಮ್ಮ ಒಂದು ವರ್ಷದ ಮಗಳನ್ನು ತಲೆಯ ಮೇಲಿರಿಸಿಕೊಂಡು ತುಂಬಿದ ಹೊಳೆ ದಾಟಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆ ತಂದೆ ಜೀವದ ಹಂಗು ತೊರೆದು ಈ ಸಾಹಸಕ್ಕೆ ಕೈಹಾಕಿದ್ದು ತಮ್ಮ ಕಾಯಿಲೆ ಪೀಡಿತ ಮಗಳನ್ನು ಉಳಿಸಿಕೊಳ್ಳುವ ಸಲುವಾಗಿ.

ವಿಶಾಖಪಟ್ಟಣ ಜಿಲ್ಲೆಯ ಚಿಂತಪಲ್ಲಿಯ ಬುಡಕಟ್ಟು ಪ್ರದೇಶವಾದ, ಮಾವೊವಾದಿ ಪೀಡಿತ ಕುದುಮುಸರಿಯಲ್ಲಿ ನಡೆದ ಈ ಘಟನೆ ಹಿಂದೆ ಅಲ್ಲಿನ ಜನರ ಸಂಕಷ್ಟದ ಬದುಕೂ ಅನಾವರಣಗೊಂಡಿದೆ. ಕುದುಮುಸರಿಗೆ ಯಾವುದೇ ನೇರ ರಸ್ತೆ ಸಂಪರ್ಕವಿಲ್ಲ. ಗ್ರಾಮಸ್ಥರು ಬಾಲಪಮ್ ಪಂಚಾಯಿತಿಯ ಕೇಂದ್ರ ಕಚೇರಿಗೆ ಬರಲು ಇಡೀ ಹಳ್ಳಿಯನ್ನು ಸುತ್ತುವರೆದಿರುವ ಸಣ್ಣ ಹೊಳೆಯನ್ನು ದಾಟಿ ಬರಬೇಕು. ಕಳೆದ ವಾರ ಭಾರಿ ಮಳೆ ಸುರಿದಿದ್ದರಿಂದ ಹೊಳೆ ತುಂಬಿ ಹರಿದು, ಅವರ ಹೊರಜಗತ್ತಿನ ಎಲ್ಲ ಸಂಪರ್ಕಗಳನ್ನೂ ಕಡಿದುಹಾಕಿತ್ತು. ಸತಿಬಾಬು ಅವರು ಕಾಯಿಲೆಗೆ ತುತ್ತಾಗಿದ್ದ ತಮ್ಮ ಮಗುವನ್ನು ಲೊಥುಗೆಡ್ಡಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲೇಬೇಕಾಗಿತ್ತು. ಹೀಗಾಗಿ ಗೆಳೆಯನ ನೆರವಿನೊಂದಿಗೆ ಹೊಳೆ ದಾಟುವ ಸಾಹಸಕ್ಕೆ ಮುಂದಾದರು.

ತುಂಬಿ ಹರಿಯುತ್ತಿದ್ದ ಹೊಳೆಯು ಆಳವಾಗಿದ್ದಲ್ಲದೆ, ನೀರಿನ ಹರಿವೂ ಸಾಕಷ್ಟು ವೇಗವಾಗಿತ್ತು. ಊರಿನವರ ಎಚ್ಚರಿಕೆಗಳನ್ನು ಲೆಕ್ಕಿಸದೆಯೇ ಸತಿಬಾಬು ತಮ್ಮ ಮಗಳನ್ನು ತಲೆಯ ಮೇಲಿರಿಸಿಕೊಂಡು ದಿಟ್ಟತನದಿಂದ ಹೊಳೆಯನ್ನು ದಾಟಿದರು. ಮತ್ತೆ ಐದು ಕಿ.ಮೀ. ನಡೆದು ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿದರು. ವೈದ್ಯರು ಕೂಡಲೇ ಚಿಕಿತ್ಸೆ ನೀಡಿದ್ದರಿಂದ ಪುಟ್ಟಮಗುವನ್ನು ಉಳಿಸಿಕೊಳ್ಳುವಲ್ಲಿ ಸತಿ ಬಾಬು ಯಶಸ್ವಿಯಾದರು. ಸತಿಬಾಬು ಅವರು ಮಗುವಿನೊಂದಿಗೆ ಹೊಳೆ ದಾಟಿದ ಚಿತ್ರ ಎಲ್ಲೆಡೆ ವ್ಯಾಪಕವಾಗಿ ಹರಡಿದೆ. ಅಲ್ಲದೆ ತೀವ್ರ ಚರ್ಚೆಯನ್ನೂ ಹುಟ್ಟುಹಾಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin