ಸೌತೆಕಾಯಿ ಮಾರಲು ಬಂದಿದ್ದ ರೈತ ಪೊದೆಯಲ್ಲಿ ಶವವಾಗಿ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Former--02

ಕೆ.ಆರ್.ಪೇಟೆ, ಫೆ.7- ಮಾರುಕಟ್ಟೆಗೆ ಸೌತೆಕಾಯಿ ಮಾರಾಟ ಮಾಡಲು ಬಂದಿದ್ದ ಪ್ರಗತಿಪರ ರೈತ ಖಾಲಿ ಜಾಗದ ಪೊದೆಯೊಂದರ ಬಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮ್ಮೇನಹಳ್ಳಿ ಗ್ರಾಮದ ವೀರಭದ್ರಪ್ಪ ಅಲಿಯಾಸ್ ಮೂಗಣ್ಣ (48) ನಿನೆ ಸಂತೆಗೆ ಸೌತೆಕಾಯಿಗಳನ್ನು ತುಂಬಿಕೊಂಡು ಪಟ್ಟಣಕ್ಕೆ ಬಂದಿದ್ದರು. ಹೊಸ ಹೊಳಲು ಗ್ರಾಮಕ್ಕೆ ಬಂದಿದ್ದರು. ಇಂದು ಬೆಳಗ್ಗೆ ಇಲ್ಲಿನ ಎಸ್‍ಎಲ್‍ಎನ್ ಸಮುದಾಯ ಭವನದ ಮುಳ್ಳಿನ ಪೊದೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಕೃಷಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ವೀರಭದ್ರಪ್ಪ ಅವರು ಸರಳ ಜೀವನ ನಡೆಸುತ್ತಿದ್ದರು. ತಾವೇ ಜಮೀನಿನಲ್ಲಿ ದುಡಿದು ವೈಜ್ಞಾನಿಕವಾಗಿ ಬೆಳೆ ಹೇಗೆ ಬೆಳೆಯಬೇಕು ಎಂಬುದನ್ನು ಜಿಲ್ಲೆಯ ನಾನಾ ಕಡೆ ರೈತರಿಗೆ ಪರಿಚಯ ಕೂಡ ಮಾಡಿಸಿದ್ದರು.  ಅವರ ಅನುಮಾನಾಸ್ಪದ ಸಾವು ಈಗ ಆತಂಕಕ್ಕೆ ಕಾರಣವಾಗಿದ್ದು , ಈ ಸಂಬಂಧ ಮೃತರ ಪತ್ನಿ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು , ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು , ನಿಖರ ಕಾರಣಗಳು ತಿಳಿದು ಬರಲಿವೆ.

Facebook Comments

Sri Raghav

Admin