ಸೌದಿಯಲ್ಲಿ ಟ್ರಂಪ್’ಗೆ ಭವ್ಯ ಸ್ವಾಗತ, ಮಹತ್ವದ ಒಪ್ಪಂದಕ್ಕೆ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ರಿಯಾದ್, ಮೇ 21-ಅಮೆರಿಕ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಸೌದಿಯಲ್ಲಿ ಭವ್ಯ ಸ್ವಾಗತ ನೀಡಲಾಗಿದೆ. ಒಂಭತ್ತು ದಿನಗಳ ಪ್ರವಾಸದ ಮೊದಲ ಚರಣವಾಗಿ ರಿಯಾದ್‍ಗೆ ಆಗಮಿಸಿದ ಟ್ರಂಪ್‍ಗೆ ಚಿನ್ನಡ ಪದಕದೊಂದಿಗೆ ರಾಜಮನೆತನವು ಅದ್ದೂರಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಇದಕ್ಕೆ ಪ್ರತಿಯಾಗಿ ಟ್ರಂಪ್ ಸೌದಿ ಅರೇಬಿಯಾದ ಭದ್ರತೆಗಾಗಿ 110 ದಶಲಕ್ಷ ಡಾಲರ್‍ಗಳ ಶಸ್ತ್ರಾಸ್ತ್ರ ಪ್ಯಾಕೇಜ್ ಬಳುವಳಿಯಾಗಿ ನೀಡಿದ್ದಾರೆ.  ಇದೊಂದು ಅದ್ಭುತ ದಿನ, ಸೌದಿ ಮತ್ತು ಅಮೆರಿಕ ನಡುವೆ ಮಹತ್ವದ ಬಂಡವಾಳ ಹೂಡಿಕೆಗೆ ಮುನ್ನಡಿಯಾದ ದಿವಸ ಎಂದು ನಿನ್ನೆ ಟ್ರಂಪ್ ಸೌದಿ ರಾಜಕುಮಾರ್ ಮಹಮದ್ ಬಿನ್ ನಯೆಫ್ ಭೇಟಿ ವೇಳೆ ಹೇಳಿದ್ದರು.ತಮ್ಮ ಮೊದಲ ವಿದೇಶ ಪ್ರವಾಸದ ವೇಳೆ ಭಯೋತ್ಪಾದನೆ ವಿರುದ್ಧ ನಾಗರಿಕ ಜಗತ್ತನ್ನು ಒಗ್ಗೂಡಿಸುವುದಾಗಿ ಟ್ರಂಪ್ ಹೇಳಿದ್ದರು. ಸೌದಿ ಅರೇಬಿಯಾ, ಇಸ್ರೇಲ್. ವ್ಯಾಟಿಕನ್, ಬೆಲ್ಜಿಯಂ ಮತ್ತು ಇಟಲಿಗೆ 9 ದಿನಗಳ ಕಾಲ ಭೇಟಿ ನೀಡಲಿದ್ದಾರೆ.   ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಪ್ರಬಲ ಹೋರಾಟ ನಡೆಸುವ ಅಗತ್ಯತೆ ಇದೆ ಎಂದು ಸೌದಿ ಭೇಟಿ ವೇಳೆ ಟ್ರಂಪ್ ಮುಸ್ಲಿಂ ರಾಷ್ಟ್ರಗಳ ನಾಯಕರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಸೌದಿ ಪ್ರವಾಸದ ವೇಳೆ ಟ್ರಂಪ್ 50ಕ್ಕೂ ಹೆಚ್ಚು ಮುಸ್ಲಿಂ ದೇಶಗಳ ಅಧಿಪತಿಗಳು ಮತ್ತು ಧುರೀಣರೊಂದಿಗೆ ಭೋಜನ ಕೂಟದಲ್ಲಿ ಟ್ರಂಪ್ ಭಾಗವಹಿಸುವರು. ಈ ಸಂದರ್ಭದಲ್ಲಿ ಅವರು ಎಲ್ಲ ದೇಶಗಳಿಗೂ ಕಂಟಕವಾಗಿರುವ ಭಯೋತ್ಪಾದನೆಯನ್ನು ನಿಗ್ರಹಿಸುವ ಅಗತ್ಯವನ್ನು ಪ್ರತಿಪಾದಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin