ಸೌದಿಯಲ್ಲಿ 1 ಲಕ್ಷ ಅಕ್ರಮ ನಿವಾಸಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Soudi-Arebia

ಜೆಡ್ಡಾ, ಮೇ 13- ಸೌದಿ ಅರೇಬಿಯಾದ ಅಕ್ರಮ ವಲಸಿಗರಿಗೆ ಕ್ಷಮಾದಾನ ಕಾರ್ಯಕ್ರಮದ ಅನ್ವಯ, 32,000ಕ್ಕೂ ಹೆಚ್ಚು ಅಕ್ರಮ ವಾಸಿ ವಿದೇಶಿಯರು ದೇಶ ಬಿಟ್ಟು ಹೋಗಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಅಲ್ಲದೇ ದೇಶದ ವಸತಿ ಕಾನೂನುಗಳನ್ನು ಉಲ್ಲಂಘಿಸಿದ ಒಂದು ಲಕ್ಷಕ್ಕೂ ಅಧಿಕ ಅಕ್ರಮ ನಿವಾಸಿಗಳನ್ನು ಬಂಧಿಸಲಾಗಿದೆ.   ಅಕ್ರಮ ವಲಸಿಗರೆಲ್ಲದ ದೇಶ ಎಂಬ ಸೌದಿ ಅರೇಬಿಯಾ ಸರ್ಕಾರದ ಅಭಿಯಾನ ಆರಂಭವಾದ ಮಾರ್ಚ್ 29ರಿಂದ ಈವರೆಗೆ ಕಾನೂನು ಅನ್ವಯ ಅಕ್ರಮ ವಾಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.ಕ್ಷಮಾದಾನ ಕಾರ್ಯಕ್ರಮದ ಪ್ರಕಾರ, ಸೌದಿಯಲ್ಲಿ ಅಕ್ರಮವಾಗಿ ನೆಲೆಸಿರುವವರಿಗೆ ಯಾವುದೇ ಶಿಕ್ಷೆ ಅಥವಾ ದಂಡ ವಿಧಿಸದೇ ದೇಶ ತೊರೆಯಲು 90 ದಿನಗಳ ಕಾಲಾವಕಾಶ ನೀಡಲಾಗುವುದು. ಈ ಅವಧಿಯಲ್ಲಿ ದೇಶದಿಂದ ಹೊರಗೆ ಹೋಗದವರನ್ನು ಅಪರಾಧಿ ಎಂದು ಪರಿಗಣಿಸಲಾಗುವುದು. ಅವರಿಗೆ ಶಿಕ್ಷೆಯ ರೂಪದಲ್ಲಿ ದಂಡ ಮತ್ತು ಇತರ ಶುಲ್ಕಗಳನ್ನು ವಿಧಿಸಲಾಗುವುದು ಎಂದು ಅಭಿಯಾನದ ಉಪ ಉಸ್ತುವಾರಿ ಕರ್ನಲ್ ಸಫರ್ ಬಿನ್ ಡ್ಲೇಮ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin