ಸೌದಿ ಶವಾಗಾರದಲ್ಲಿ ಕೊಳೆಯುತ್ತಿವೆ 150 ಭಾರತೀಯರ ಶವಗಳು

ಈ ಸುದ್ದಿಯನ್ನು ಶೇರ್ ಮಾಡಿ

Dead-Body-01

ಹೈದರಾಬಾದ್, ಡಿ.12-ಉದ್ಯೋಗ ಅರಸಿ ಸೌದಿ ಅರೇಬಿಯಾಗೆ ತೆರಳಿ ಸಾವಿರಾರು ಭಾರತೀಯರು ಪಡಿಪಾಟಲು ಅನುಭವಿಸುತ್ತಿರುವುದು ಒಂದೆಡೆ ಯಾದರೆ, ಇನ್ನೊಂದೆಡೆ ಅಲ್ಲಿ ಮೃತಪಟ್ಟಿರುವ ಭಾರತೀಯರ ಶವಗಳನ್ನು ಸ್ವದೇಶಕ್ಕೆ ತರಲಾಗದೆ ಅವರ ಕುಟುಂಬಗಳು ತೀವ್ರ ಯಾತನೆ ಅನುಭವಿಸುತ್ತಿವೆ. ಅನಾರೋಗ್ಯ, ಅಪಘಾತ, ಆತ್ಮಹತ್ಯೆ, ಕೊಲೆ ಮೊದಲಾದ ಕಾರಣಗಳಿಂದ ಸೌದಿಯಲ್ಲಿ 150ಕ್ಕೂ ಹೆಚ್ಚು ಭಾರತೀಯರು ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕ ಮಂದಿ ತೆಲಂಗಾಣ ಮತ್ತು ಆಂಧ್ರಪ್ರದೇಶದವರು.

ಹಲವು ತಿಂಗಳಿನಿಂದ 150ಕ್ಕೂ ಹೆಚ್ಚು ಶವಗಳು ಶವಾಗಾರದಲ್ಲಿ ಅನಾಥವಾಗಿ ಬಿದ್ದಿವೆ. ಅಂತ್ಯಕ್ರಿಯೆಗಾಗಿ ಅವುಗಳನ್ನು ಹೈದರಾಬಾದ್‍ಗೆ ತರಲು ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಅಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಸಿಬ್ಬಂದಿ ಅಸಹಾಯಕತೆಯಿಂದ ಕೈಚೆಲ್ಲಿದ್ದಾರೆ. ಭಾರತೀಯರ ಶವಗಳನ್ನು ತಕ್ಷಣ ಅವರ ಕುಟುಂಬ ವರ್ಗದವರಿಗೆ ಹಸ್ತಾಂತರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಿಯಾದ್‍ನಲ್ಲಿರುವ ರಾಜತಾಂತ್ರಿಕ ಕಚೇರಿಗೆ ಅನೇಕ ಪತ್ರಗಳನ್ನೂ ಬರೆದಿದ್ದರೂ ನಿಷ್ಫಲವಾಗಿದೆ.

ಈ ಬಗ್ಗೆ ನಾವು ಸೌದಿ ಸರ್ಕಾರಿ ಅಧಿಕಾರಿಗಳಿಗೆ ಮತ್ತೆ ಮತ್ತೆ ಮನವಿ ಮಾಡಿದ್ದರೂ ಅವರು ಕಾನೂನು ಕಾರಣದ ಸಬೂಬುಗಳನ್ನು ಹೇಳಿ ವಿಳಂಬ ಮಾಡುತ್ತಿದ್ದಾರೆ ಎಂಬ ಅಸಹಾಯಕತೆಯನ್ನು ಭಾರತೀಯ ರಾಜತಾಂತ್ರಿಕ ಕಚೇರಿಯ ಅಧಿಕಾರಿಗಳು ತೋಡಿಕೊಂಡಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin