ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ವಿವಿಧ ಉದ್ಯೋಗವಕಾಶಗಳು

ಈ ಸುದ್ದಿಯನ್ನು ಶೇರ್ ಮಾಡಿ

souharda

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತವು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ : 60
ಹುದ್ದೆಗಳ ವಿವರ
1.ಉಪ ಪ್ರಧಾನ ವ್ಯವಸ್ಥಾಪಕರು – 02
2.ಸಹ ಪ್ರಧಾನ ವ್ಯವಸ್ಥಾಪಕರು – 02
3.ಅಧಿಕಾರಿ – 02
4.ತಾಂತ್ರಿಕ ಅಧಿಕಾರಿ – 02
5.ಸೌಹಾರ್ದ ಅಭಿವೃದ್ಧಿ ಅಧಿಕಾರಿ – 12
6.ವಿನ್ಯಾಸಗಾರರು – 01
7.ಸಹಾಯಕರು – 22
8.ಶೀಘ್ರಲಿಪಿಗಾರರು – 06
9.ಉಪ ಸಿಬ್ಬಂದಿ – 02
10. ಉಪ ಸಿಬ್ಬಂದಿ ಕಮ್ ವಾಹನ ಚಾಲಕ – 03
11.ಸ್ವಚ್ಚತಾ ಸಿಬ್ಬಂದಿ – 01

ವಿದ್ಯಾರ್ಹತೆ : ಕ್ರ. ಸಂ 1ರ ಹುದ್ದೆಗೆ ಕಾನೂನು ಪದವಿ/ಸ್ನಾತಕೋತ್ತರ ಪದವಿ, ಕ್ರ. ಸಂ 2,3ರ ಹುದ್ದೆಗೆ ಯಾವುದೇ ಪದವಿ/ಸ್ನಾತಕೋತ್ತರ ಪದವಿ, ಕ್ರ. ಸಂ 4ರ ಹುದ್ದೆಗೆ ಬಿಇ/ಬಿ.ಟೆಕ್ ಅಥವಾ ಎಂಸಿಎ/ಸ್ನಾತಕೋತ್ತರ ಪದವಿ, ಕ್ರ. ಸಂ 5,6,7,8ರ ಹುದ್ದೆಗೆ ಯಾವುದೇ ಪದವಿ, ಕ್ರ. ಸಂ 9,10ರ ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ಇದಕ್ಕೆ ಸಮಾನ ಶಿಕ್ಷಣ, ಕ್ರ. ಸಂ 11ರ ಹುದ್ದೆಗೆ 7ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ : ಎಲ್ಲಾ ಹುದ್ದೆಗಳಿಗೂ ಕನಿಷ್ಠ 18 ವರ್ಷ ನಿಗದಿ ಮಾಡಲಾಗಿದ್ದು, ಗರಿಷ್ಠ ವಯೋಮಿತಿಯನ್ನು ಕ್ರ. ಸಂ 1ರ ಹುದ್ದೆಗೆ 38 ವರ್ಷ, ಕ್ರ. ಸಂ 2 ರಿಂದ 7ರ ಹುದ್ದೆಗಳಿಗೆ 35 ವರ್ಷ, 8 ರಿಂದ 11ರ ಹುದ್ದೆಗಳಿಗೆ 30 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ.

ಶುಲ್ಕ : ಕ್ರ. ಸಂ 1 ರಿಂದ 6ರ ಹುದ್ದೆಗಳಿಗೆ 2000 ರೂ, ಶೀಘ್ರಲಿಪಿಗಾರರು/ಸಹಾಯಕ ಹುದ್ದೆಗಳಿಗೆ 1000 ರೂ, ವಾಹನ ಚಾಲಕ/ಉಪಸಿಬ್ಬಂದಿ/ಸ್ವಚ್ಛತಾ ಸಿಬ್ಬಂದಿ ಹುದ್ದೆಗಳಿಗೆ 500 ರೂ ಶುಲ್ಕ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-02-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.souharda.coop  ಗೆ ಭೇಟಿ ನೀಡಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin