‘ಸ್ಕರ್ಟ್ ಧರಿಸಿ ಭಾರತ ಪ್ರವಾಸಕ್ಕೆ ಬರಬೇಡಿ’

ಈ ಸುದ್ದಿಯನ್ನು ಶೇರ್ ಮಾಡಿ

Skirt

ನವದೆಹಲಿ,ಆ.29- ಪ್ರವಾಸಕ್ಕಾಗಿ ಭಾರತಕ್ಕೆ ಬರುವ ವಿದೇಶಿ ಮಹಿಳೆಯರು ಸ್ಕರ್ಟ್ ಧರಿಸಿಕೊಂಡು ಬರಕೂಡದು ಎಂದು ಹೇಳುವ ಮೂಲಕ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮ ಹೊಸ ವಿವಾದ ಸೃಷ್ಟಿಸಿದ್ದಾರೆ.   ಮಥುರಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮ, ವಿಮಾನ ನಿಲ್ದಾಣಗಳಿಗೆ ವಿದೇಶದಿಂದ ಬಂದಿಳಿಯುವ ಮಹಿಳೆಯರಿಗೆಲ್ಲ ಇಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬ ಬಗ್ಗೆ ಒಂದು ಚಾರ್ಟ್ ನೀಡಲಾಗುವುದು ಎಂದು ಹೇಳಿದ್ದಾರೆ.  ಈ ವೆಲ್ಕಮ್ ಕಿಟ್ನಲ್ಲಿ ಭಾರತಕ್ಕೆ ಬರುವಾಗ ಯಾವ ಬಟ್ಟೆ ಧರಿಸಬೇಕು, ಯಾವ ಬಟ್ಟೆ ಧರಿಸಬಾರದು, ಹೇಗಿರಬೇಕು, ಏನು ಮಾಡಬೇಕು ಎಂಬ ಅಂಶಗಳನ್ನು ಒಳಗೊಂಡಿರುತ್ತದೆ. ಅದರಂತೆ ಅವರು ನಡೆಯಬೇಕು. ವಿದೇಶಿ ಮಹಿಳೆಯರು ಇಲ್ಲಿ ಸ್ಕರ್ಟ್ ಧರಿಸಬಾರದು ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ(ಸ್ವತಂತ್ರ) ಮಹೇಶ್ ಶರ್ಮ ತಿಳಿಸಿದ್ದಾರೆ.

ವಿದೇಶಿ ಮಹಿಳೆಯರು ಸ್ಕರ್ಟ್ ಧರಿಸಿ ಬರುವುದರಿಂದ ಇಲ್ಲಿ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು ಇದು ಅಗತ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin