ಸ್ಟೀಲ್ ಬ್ರಿಡ್ಜ್ ಬೇಡ, ಚುಕು ಬುಕು ರೈಲು ಬೇಕು

ಈ ಸುದ್ದಿಯನ್ನು ಶೇರ್ ಮಾಡಿ

Steel-Bridge-01

ಬೆಂಗಳೂರು, ಡಿ.17- ಸಿಟಿಜನ್ ಫಾರ್ ಬೆಂಗಳೂರು ವತಿಯಿಂದ ಸ್ಟೀಲ್‍ಬ್ರಿಡ್ಜ್ ನಿರ್ಮಾಣ ವಿರೋಧಿಸಿ ವಸಂತನಗರ ರೈಲ್ವೆ ಸ್ಟೇಷನ್‍ನಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ವಿಭಿನ್ನ ವೇಷ ಧರಿಸಿದ ಸಂಸ್ಥೆಯ ಕಾರ್ಯಕರ್ತರು ಚುಕುಬುಕು ರೈಲು ಬೇಕು, ಬೆಂಗಳೂರು ಉಪನಗರಕ್ಕೆ ರೈಲ್ವೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.  ಕಂಟೋನ್ಮೆಂಟ್‍ನಿಂದ ವೈಟ್‍ಫೀಲ್ಡ್‍ವರೆಗೆ ಟಿಕೆಟ್ ಪಡೆದು ಪ್ರಯಾಣ ಮಾಡಿದ ಸಿಟಿಜನ್ ಫಾರ್ ಬೆಂಗಳೂರು ಸಂಸ್ಥೆಯ ರಘು ದೀಕ್ಷಿತ್, ಪ್ರಕಾಶ್ ಬೆಳವಡಿ ಸೇರಿದಂತೆ ಹಲವರು ಲೋಕಲ್ ಟ್ರೈನ್‍ನಿಂದ ಬೆಂಗಳೂರಿನ ಶೇ.30ರಷ್ಟು ಟ್ರಾಫಿಕ್ ಕಡಿಮೆಯಾಗಲಿದೆ. ಹಾಗಾಗಿ ಸ್ಟೀಲ್‍ಬ್ರಿಡ್ಜ್ ನಿರ್ಮಾಣದ ಬದಲು ನಗರಕ್ಕೆ ಲೋಕಲ್ ಟ್ರೈನ್ ತರಬೇಕೆಂದು ಆಗ್ರಹಿಸಿದರು.

ಸ್ಟೀಲ್‍ಬ್ರಿಡ್ಜ್ ನಿರ್ಮಾಣದಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ. ನೂರಾರು ಮರಗಳನ್ನು ಕಡಿಯಬೇಕಾಗುತ್ತದೆ. ಬೆಂಗಳೂರಿನ ಪರಿಸರ ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕಿದೆ. ಹಾಗಾಗಿ ಲೋಕಲ್ ಟ್ರೈನ್ ವ್ಯವಸ್ಥೆ ಕಲ್ಪಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin