ಸ್ಟೀವನ್ ಸ್ಮಿತ್ ಸರ್ವಶ್ರೇಷ್ಠ ಸಾಧನೆ : ನ್ಯೂಜಿಲೆಂಡ್‍ಗೆ 325 ರನ್‍ಗಳ ಗುರಿ

ಈ ಸುದ್ದಿಯನ್ನು ಶೇರ್ ಮಾಡಿ

Smith01

ಸಿಡ್ನಿ , ಡಿ.4- ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ (164 ರನ್, 14 ಬೌಂಡರಿ, 4 ಸಿಕ್ಸರ್)ರ ಸರ್ವಶ್ರೇಷ್ಠ ಸಾಧನೆಯಿಂದ ನ್ಯೂಜಿಲೆಂಡ್‍ಗೆ 325 ರನ್‍ಗಳ ಗೆಲುವಿನ ಗುರಿಯನ್ನು ನೀಡಿದೆ.  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲೇ ಆರೋನ್ ಫಿಂಚ್ (0) ರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಎರಡನೇ ವಿಕೆಟ್‍ಗೆ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ 46 ರ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು. ಆದರೆ 10 ನೆ ಓವರ್‍ನಲ್ಲಿ ವಾರ್ನರ್ (24ರನ್, 4 ಬೌಂಡರಿ)ರ ವಿಕೆಟ್ ಕಳೆದುಕೊಂಡರು.

ನಂತರ ಬಂದ ಜಾರ್ಜ್ ಬೈಲ್ಲಿ (17 ರನ್) ಹಾಗೂ ಮಿಚಲ್ ಮಾರ್ಷ್ (1 ರನ್) ಬಲು ಬೇಗ ವಿಕೆಟ್ ಒಪ್ಪಿಸಿದರು. ನಾಯಕ ಸ್ಟಿವನ್ ಸ್ಮಿತ್ (164 ರನ್), ಟ್ರ್ರಾವಿಸ್ ಹೆಡ್ ( 52 ರನ್, 5 ಬೌಂಡರಿ) ಹಾಗೂ ಮ್ಯಾಥ್ಯೂ ವೇಡ್ (38 ರನ್, 1 ಬೌಂಡರಿ, 3 ಸಿಕ್ಸರ್) ಗಳ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 324 ರನ್‍ಗಳನ್ನು ಕಲೆ ಹಾಕಿತು.  ನ್ಯೂಜಿಲೆಂಡ್ ಪರ ನಿಶಮ್ 3 ವಿಕೆಟ್ ಕಬಳಿಸಿದರೆ, ಟ್ರೆಂಟ್ ಬೋಲ್ಟ್ -2, ಹೆನ್ರಿ, ಫಾಗ್ರ್ಯುಸನ್, ಗ್ರ್ಯಾಂಡ್ ಹೋಮೆ ತಲಾ ಒಂದು ವಿಕೆಟ್ ಕೆಡವಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin