ಸ್ತನಗಳು ಜೋತು ಬೀಳುವ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಪರಿಹಾರಗಳು

ಈ ಸುದ್ದಿಯನ್ನು ಶೇರ್ ಮಾಡಿ

Breast--01

ಮಹಿಳೆಯ ದೇಹ ಸೌಂದರ್ಯದ ಪ್ರಮುಖ ಅಂಗವಾಗಿರುವುದು ಸ್ತನಗಳು. ಇದು ಕೇವಲ ಮಹಿಳೆಯ ದೇಹದ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೆ ಗರ್ಭಧಾರಣೆ ಬಳಿಕ ಮಗುವಿನ ಜೀವಹನಿ ನೀಡುವುದು. ಅಸ್ಥಿರಜ್ಜು ಹಾಗೂ ಅಂಗಾಂಶಗಳಿಂದ ಕೂಡಿರುವ ಸ್ತನದಲ್ಲಿ ಯಾವುದೇ ಎಲುಬುಗಳಿಲ್ಲ. ಇದೇ ಕಾರಣದಿಂದಾಗಿ ವಯಸ್ಸಾಗುತ್ತಾ ಹೋದಂತೆ ಸ್ತನಗಳು ತಮ್ಮ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳುವುದು. ಇದರಿಂದಾಗಿ ಅವುಗಳು ಜೋತು ಬೀಳಲು ಆರಂಭಿಸುವುದು. ಜೋತು ಬೀಳುವ ಸ್ತನಗಳು ಜೋತು ಬೀಳದಂತೆ ಹೇಗೆ ತಡೆಯಬಹುದು ಎಂಬುದಕ್ಕೆ ಪರಿಹಾರಗಳು ಇಲ್ಲಿವೆ ನೋಡಿ.

+ ಸ್ತನಗಳ ತೂಕ ಒಂದು ಹೆಂಗಸಿನಿಂದ ಇನ್ನೊಂದು ಹೆಂಗಸಿಗೆ ಬೇರೆಯಾಗಿರುತ್ತದೆ. ತೂಕವು ಸ್ತನಗಳ ಗಾತ್ರ ಮೇಲೆ ಹಾಗು ಸ್ತನಗಳಲ್ಲಿನ ಫ್ಯಾಟಿ ಅಂಗಾಂಶಗಳು ಮತ್ತು ದಟ್ಟ ಅಂಗಾಂಶಗಳ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಸರಾಸರಿ ಒಂದು ಸ್ತನವು ಅರ್ಧ ಕೆಜಿ ತೂಕ ಹೊಂದಿರುತ್ತದೆ ಮತ್ತು ದೇಹದ 4-5% ಅಷ್ಟು ಕೊಬ್ಬನ್ನು ಇದು ಹೊಂದಿರುತ್ತದೆ. ಈ ಕಾರಣದಿಂದಲೇ ಸ್ತನಗಳು ಕೆಲವರಲ್ಲಿ ಜೋತುಬಿದ್ದು ದೇಹದ ಸೌಂದರ್ಯವನ್ನು ಹಾಳುಮಾಡುತ್ತಿರುತ್ತವೆ. ಸದಾ ನಿಮ್ಮ ಸ್ತನಗಳ ತೂಕವನ್ನು ಸರಿಯಾದ ರೀತಿಯಲ್ಲಿ ಕಾಯ್ದುಕೊಳ್ಳಿ.

Bra-03

+ ಧೂಮಪಾನ ಮಾಡುವ ಹೆಂಗಸರ ಸ್ತನಗಳು ಹೆಚ್ಚು ಜೋತು ಬಿದ್ದಿರುತ್ತವೆ. ಇದಕ್ಕೆ ಕಾರಣ ಎಂದರೆ ಅದು ಸಿಗರೇಟ್ ಅಲ್ಲಿರುವ ರಾಸಾಯನಿಕಗಳು. ಇವುಗಳು ದೇಹದಲ್ಲಿನ ಎಲಾಸ್ಟಿನ್ ಅನ್ನು ಕಡಿಮೆ ಮಾಡಿ ಸ್ತನಗಳು ಜೋತು ಬೀಳುವಂತೆ ಮಾಡುತ್ತವೆ. ಆದಷ್ಟು ಧೂಮಪಾನದಿಂದ ದೂರವಿರಿ.

+ ಜೋತು ಬಿದ್ದ ಸ್ತನಗಳಿಗೆ ಪರಿಹಾರಕ್ಕೆ ಮನೆಮದ್ದನ್ನು ಬಳಸುವ ಮೊದಲು ನೀವು ಅದು ಜೋತು ಬೀಳಲು ಕಾರಣವೇನೆಂದು ತಿಳಿದುಕೊಂಡರೆ ಅದರಿಂದ ಪರಿಹಾರ ನೀಡಲು ತುಂಬಾ ಸುಲಭ. ಸ್ತನ ಜೋತು ಬೀಳಲು ಪ್ರಮುಖ ಕಾರಣವೆಂದರೆ ವಯಸ್ಸು. ವಯಸ್ಸಾಗುತ್ತಿರುವ ಮಹಿಳೆಯರಲ್ಲಿ ಇದು ಸಾಮಾನ್ಯ. ಆದರೆ ಹದಿಹರೆಯದ ಮಹಿಳೆಯರಲ್ಲಿ ಬಿಗಿ ಹಾಗೂ ಒಳ್ಳೆಯ ಆಕಾರದ ಸ್ತನಗಳಿರುವುದು. ಅಧ್ಯಯನಗಳ ಪ್ರಕಾರ ಮಹಿಳೆಯು ತನ್ನ 30ರ ಹರೆಯದಲ್ಲಿ ಚರ್ಮದ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳಲು ಆರಂಭಿಸುವಳು. ಅದರಲ್ಲೂ ಗರ್ಭಧರಿಸಿದ ಮಹಿಳೆಯರ ದೇಹದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳು ಆಗುವುದು. ಸ್ತನಗಳು ಇಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣ ಅವುಗಳ ಆಕಾರದಲ್ಲಿ ಬದಲಾವಣೆಗಳಾಗುವುದು. ಮಗುವಿಗೆ ಹಾಲುಣಿಸುವುದು ಕೂಡ ಇದರಲ್ಲಿ ಒಂದು ಕಾರಣವಾಗಿದೆ. ಎದೆಯಲ್ಲಿನ ಕೋಶಗಳು ತಮ್ಮ ಬಿಗಿತ್ವ ಕಳೆದುಕೊಳ್ಳುವ ಕಾರಣದಿಂದಾಗಿ ಸ್ತನಗಳ ಗಾತ್ರದ ಮೇಲೆ ಪರಿಣಾಮವಾಗುವುದು.

Bra-02

+ ಮಹಿಳೆಯರ ಸ್ತನಗಳು ಬಿಗಿತ್ವ ಕಳೆದುಕೊಳ್ಳಲು ಇನ್ನು ಕೆಲವೊಂದು ಕಾರಣಗಳು ಕೂಡ ಇದೆ. ಅತಿಯಾಗಿ ಆಲ್ಕೋಹಾಲ್, ಸಿಗರೇಟ್, ಕಾರ್ಬ್ರೋನೇಟೆಡ್ ಪಾನೀಯಗಳು ಪ್ರಮುಖ ಕಾರಣ. ಜಾಗಿಂಗ್, ವೇಗವಾಗಿ ನಡೆಯುವುದು, ಓಡುವುದು ಇತ್ಯಾದಿ ಕೂಡ ಸ್ತನಗಳು ಬಿಗಿತ್ವ ಕಳೆದುಕೊಳ್ಳಲು ಕಾರಣವಾಗಿದೆ.

Bra-01

+ ಸರಿಯಾದ ಬ್ರಾ ಹಾಕಿಕೊಳ್ಳದೆ ಆಟವಾಡಿದರೆ ಅದರಿಂದ ಸ್ತನಗಳು ಜೋತು ಬೀಳುವುದಕ್ಕೆ ಕಾರಣವಿರಬಹುದು.

+ ಬಿಗಿ ಸ್ತನಗಳನ್ನು ಪಡೆಯಲು ಮಾರುಕಟ್ಟೆಯಲ್ಲಿ ಇಂದಿನ ದಿನಗಳಲ್ಲಿ ಹಲವಾರು ರಿತಿಯ ಲೋಷನ್ ಮತ್ತು ಚಿಕಿತ್ಸೆಗಳು ಲಭ್ಯವಿದೆ. ಆದರೆ ನೈಸರ್ಗಿಕ ಹಾಗೂ ಸಾವಯವವಾದ ಮನೆಮದ್ದನ್ನು ಬಳಸಿಕೊಂಡು ಸ್ತನಗಳ ಬಿಗಿತ್ವ ಕಾಪಾಡಿಕೊಳ್ಳಬೇಕು.

+ 1/4 ಕಪ್ ಮೆಂತೆಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಇದನ್ನು ಸ್ತನಗಳ ಮೇಲೆ ಹಚ್ಚಿಕೊಂಡು ಹಾಗೆ ಹತ್ತು ನಿಮಿಷ ಕಾಲ ಬಿಡಿ ಮತ್ತು ಬಳಿಕ ತೊಳೆಯಿರಿ. 15 ದಿನಕ್ಕೊಮ್ಮೆ ಹೀಗೆ ಮಾಡಿದರೆ ಸುಂದರ ಹಾಗೂ ಬಿಗಿಯಾಗಿರುವ ಸ್ತನಗಳನ್ನು ಪಡೆಬಹುದು.

+ ಒಂದು ಮೊಟ್ಟೆಯನ್ನು ಒಡೆದು ಅದನ್ನು ಸರಿಯಾಗಿ ಕಲಸಿಕೊಳ್ಳಿ. ಇದನ್ನು ಸ್ತನಗಳ ಮೇಲೆ ಹಚ್ಚಿಕೊಳ್ಳಿ. ಅದರಲ್ಲೂ ಬುಡಕ್ಕೆ ಸರಿಯಾಗಿ ಹಚ್ಚಿ. ಅರ್ಧ ಗಂಟೆ ಹಾಗೆ ಬಿಟ್ಟು ಬಳಿಕ ಸೌತೆಕಾಯಿ ಅಥವಾ ಈರುಳ್ಳಿ ಜ್ಯೂಸ್ ನಿಂದ ತೊಳೆಯಿರಿ. ಇದನ್ನು ಪ್ರತೀ ವಾರ ಬಳಸಿ.

+ ಸ್ತನಗಳು ಬಿಗಿಗೊಳ್ಳಲು ಇದು ತುಂಬಾ ಸರಳವಾಗಿರುವ ವಿಧಾನವಾಗಿದೆ. ನೀವು ನಿಯಮಿತವಾಗಿ ಪುಶ್ ಅಪ್ ಮಾಡಿದರೆ ಆಗ ಸ್ತನಗಳು ಬಿಗಿಗೊಳ್ಳುವುದು. ಎದೆ ಭಾಗದಲ್ಲಿರುವಂತಹ ಕೊಬ್ಬನ್ನು ಕರಗಿಸಿ ಸುಂದರ ಸ್ತನಗಳನ್ನು ನಿಮಗೆ ನೀಡುವುದು.

+ ಬಿಗಿಯಾಗಿರುವ ಸ್ತನಗಳನ್ನು ಪಡೆಯಲು ಇದು ತುಂಬಾ ಪರಿಣಾಮಕಾರಿ ವಿಧಾನವಾಗಿದೆ. ಎರಡು ದಿನಕ್ಕೊಮ್ಮೆ ಆಲಿವ್ ತೈಲದಿಂದ ಸ್ತನಗಳಿಗೆ ಮಸಾಜ್ ಮಾಡಿ, ಬಳಿಕ ಸ್ಥಾನ ಮಾಡಿ. ಆಲಿವ್ ತೈಲವು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು ಮತ್ತು ಅದನ್ನು ಸುಂದರಗೊಳಿಸುವುದು. ಮೇಲ್ಮುಖವಾಗಿ ಮಸಾಜ್ ಮಾಡಿದರೆ ಅದರಿಂದ ರಕ್ತ ಪರಿಚಲನೆ ಸರಾಗವಾಗುವುದು, ಕೋಶಗಳ ಸರಿಪಡಿಸುವಿಕೆ ಉತ್ತೇಜಿಸುವುದು, ಇದರಿಂದ ಸುಂದರ ಸ್ತನಗಳನ್ನು ಪಡೆಯಬಹುದು. ಐಸ್ ಮಸಾಜ್ ಇದರಲ್ಲಿ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ತಂಪಿನಿಂದಾಗಿ ಚರ್ಮವು ನೈಸರ್ಗಿಕವಾಗಿ ಬಿಗಿತ ಪಡೆಯುವುದು.

+ ನೀವು ಕುಳಿತುಕೊಳ್ಳುವ ಭಂಗಿ ಸರಿಪಡಿಸಿಕೊಳ್ಳಿ ಮತ್ತು ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳಿ. ಭುಜಗಳು ಕೆಳಗೆ ಆಗುವಂತೆ ಮುಂದಕ್ಕೆ ಬಾಗಿಕೊಂಡು ಕುಳಿತುಕೊಳ್ಳುವುದು ಸಾಮಾನ್ಯ. ಇದರಿಂದ ಸ್ತನಗಳು ಜೋತು ಬೀಳುವುದು ಸಹಜ. ಇದರಿಂದ ನೇರವಾಗಿ ಕುಳಿತುಕೊಳ್ಳಿ. ಹೆಚ್ಚು ದೇಹವನ್ನು ಮುಂದಕ್ಕೆ ಬಾಗಿಸಬೇಡಿ.

+ ದಾಳಿಂಬೆಯಲ್ಲಿ ಬಿಗಿಗೊಳಿಸುವಂತಹ ಗುಣಗಳು ಇವೆ ಮತ್ತು ಇದನ್ನು ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಹಲವಾರು ಕ್ರೀಮ್ ಗಳಲ್ಲಿ ಬಳಕೆ ಮಾಡುವರು. ದಾಳಿಂಬೆ ಸಿಪ್ಪೆ ತೆಗೆದು ಅದರ ಪೇಸ್ಟ್ ಮಾಡಿ ಅದಕ್ಕೆ ಸಾಸಿವೆ ಎಣ್ಣೆ ಹಾಕಿಕೊಳ್ಳಿ. ಪ್ರತೀ ರಾತ್ರಿ ಈ ಎಣ್ಣೆಯನ್ನು ಸ್ತನಗಳಿಗೆ ಮಸಾಜ್ ಮಾಡಿಕೊಳ್ಳಿ. ಇದರಿಂದ ಕೆಲವೇ ದಿನಗಳಲ್ಲಿ ಬಿಗಿಯಾದ ಸ್ತನಗಳು ನಿಮ್ಮದಾಗುವುದು.

+ ಬಿಗಿಯಾದ ಸ್ತನಗಳು ಬೇಕೆಂದರೆ ಅದಕ್ಕೆ ಸರಿಯಾದ ಹಿಡಿದ ಬೇಕಾಗಿದೆ. ನಿಮ್ಮ ಸ್ತನಗಳನ್ನು ಬಿಗಿಯಾಗಿ ಹಾಗೂ ಸರಿಯಾಗಿಟ್ಟಿರಲು ಬ್ರಾಗಳು ಸರಿಯಾದ ಗಾತ್ರದ್ದಾಗಿರಲಿ. ಹಳೆಯ ಬ್ರಾಗಳನ್ನು ಬದಲಾಯಿಸಿ ಹೊಸ ಬ್ರಾ ಹಾಕಿಕೊಳ್ಳಿ. ಮಾರುಕಟ್ಟೆಯಲ್ಲಿ ಕೆಲವೊಂದು ಹೆಚ್ಚಿನ ಅನುಕೂಲಗಳು ಇರುವಂತಹ ಬ್ರಾಗಳು ಕೂಡ ಲಭ್ಯವಿದೆ.

+ ಸ್ತನಗಳು ಬಿಗಿಯಾಗಿ ಹಾಗೂ ಸುಂದರವಾಗಿರಲು ಸರಿಯಾದ ಆಹಾರ ಕ್ರಮ ಮತ್ತು ಜೀವನಶೈಲಿ ಕೂಡ ಪ್ರಮುಖ ಪಾತ್ರ ವಹಿಸುವುದು. ಪ್ರೋಟೀನ್ ಅಧಿಕವಾಗಿರುವಂತಹ ಆಹಾರಗಳನ್ನು ತಿನ್ನಿ. ಇದರಿಂದ ಕಾಲಜನ್ ದೇಹದಲ್ಲಿ ಮರುಸ್ಥಾಪಿಸಲು ನೆರವಾಗುವುದು. ಇದರಿಂದ ಸ್ತನಗಳು ಬಿಗಿಯಾಗುವುದು. ಆದಷ್ಟು ಜಂಕ್ ಫುಡ್ ನ್ನು ದೂರವಿಡಿ.

ಮತ್ತಷ್ಟು ಆರೋಗ್ಯದ ಮಾಹಿತಿಗಾಗಿ : www.myhealthmylifestyle.com

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin