ಸ್ನೇಹಾಲಯ ಸಂಸ್ಥೆಯ ಅನಾಥ ಮಕ್ಕಳ ಪ್ರವಾಸಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಫೆ.28- ಅನಾಥ ಮಕ್ಕಳು ದೈವವಿದ್ದಂತೆ. ದೈವ ಸೃಷ್ಟಿಯಲ್ಲಿ ಯಾರೂ ಅನಾಥರಲ್ಲ ಎಂದು ನಗರ ಬಿಜೆಪಿ ಅಧ್ಯಕ್ಷ ಅರವಿಂದ್ ತಿಳಿಸಿದರು.ನಗರದ ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿರುವ ಅಖಿಲ ಕರ್ನಾಟಕ ಜಾಗೃತಿ ಪರಿಷತ್ ಸದಸ್ಯರ ನೆರವಿನೊಂದಿಗೆ ಸ್ನೇಹಾಲಯ ಅನಾಥ ಮಕ್ಕಳ ಸಂಸ್ಥೆಯ ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಖಿಲ ಕರ್ನಾಟಕ ಜಾಗೃತಿ ಪರಿಷತ್, ಗ್ರಾಹಕ ಕೇಂದ್ರಿತವಾಗದೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಅಭಿನಂದನೀಯ ಎಂದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜಾಗೃತಿ ಪರಿಷತ್‍ನ ಜಿಲಾಧ್ಯಕ್ಷ ಎನ್.ಎಸ್.ಮಂಜುನಾಥ್, ಸುಧೀರ್‍ಕುಮಾರ್, ಹಿಂಡವಾಳು ಚಂದ್ರಶೇಖರ್ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin