ಸ್ನೇಹಿತನ ಕೊಂದು ಸಾಕ್ಷಿ ನಾಶಕ್ಕೆ ಯತ್ನಿಸಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

devanahalli-9

ದೇವನಹಳ್ಳಿ,ಆ.15- ಮೊಬೈಲ್ ಫೋನ್‍ಗಾಗಿ ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದ ಅಪರಾಧಿಗೆ ದೇವನಹಳ್ಳಿಯ ಜಿಲ್ಲಾ 5ನೇ ಸತ್ರ ಅಪರ ಸಿವಿಲ್ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಯನ್ನು ನೀಡಿದೆ.ಕಳೆದ ಎರಡು ವರ್ಷದ ಹಿಂದೆ ಮೇಲೂರು ಗ್ರಾಮದ ಎಮ್.ಎಸ್. ಕುಮಾರ್ ಎಂಬ ವ್ಯಕ್ತಿಯನ್ನು ಬೊಮ್ಮವಾರದ ಅರಣ್ಯ ಪ್ರದೇಶದ ಒಳಗೆ ಕರೆದುಕೊಂಡು ಹೋಗಿ ಬೆಲೆಬಾಳುವ ಮೊಬೈಲ್ ಫೋನ್ ಆಸೆಯಿಂದ ಯರಪ್ಪನಹಳ್ಳಿ ಗ್ರಾಮದ ಕಾರ್ತಿಕ್ ಕುಮಾರ್ ಎಂಬಾತನು ಕೊಲೆಗೈದಿದ್ದಾನೆ ಎನ್ನಲಾಗಿತ್ತು.
ಅರಣ್ಯದಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವುದು ವ್ಯಕ್ತಿಯ ಶವ ಪತ್ತೆಯಾಗಿತ್ತು, ಫೋಲೀಸರು ವಿಚಾರಣೆ ನಡೆಸಿ ಆಗಿನ ಇನ್ಸ್‍ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ತನಿಖೆ ಕೈಗೊಂಡು ಆರೋಪಿಯನ್ನು ಬಂದಿಸಿದ್ದರು.
ಈ ಹಿಂದೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅನಂತರ ಜಮೀನು ಪಡೆದು ಹೊರಬಂದಿದ್ದ, ತದನಂತರ ವಿಚಾರಣೆಗೆ ಒಳಪಡಿಸಿದಾಗ ಆಲಿಸಿದ ನ್ಯಾಯಾಲಯವು 5ನೇ ಅಪರ ಸಿವಿಲ್ ಸತ್ರ ನ್ಯಾಯಾಧೀಶ ಆರೋಪಿಗೆ ಕಾಲಂ 302ರ ಪ್ರಕಾರ 10ವರ್ಷ ಕಠಿಣ ಜೀವಾವಧಿ ಶಿಕ್ಷೆ ಹಾಗೂ 50ಸಾವಿರ ರೂಪಾಯಿಗಳ ದಂಡ, ಸಾಕ್ಷಾದಾರ ನಾಶ ಮಾಡಲು ಪ್ರಯತ್ನಿಸಿದಕ್ಕೆ ಸೆಕ್ಷನ್ 2001ರ ಪ್ರಕಾರ 5ವರ್ಷದ ಶಿಕ್ಷೆಯನ್ನು ನೀಡಿ ತೀರ್ಪನ್ನು ನೀಡಿದೆ.  ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin