ಸ್ನೇಹಿತನ ಪತ್ನಿ ಮೇಲೆ ರೇಪ್ ಕೇಸ್, ಹಾಲಪ್ಪ ದೋಷಮುಕ್ತ

ಈ ಸುದ್ದಿಯನ್ನು ಶೇರ್ ಮಾಡಿ

Halappa

ಶಿವಮೊಗ್ಗ, ಆ.17- ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹರತಾಳ್ ಹಾಲಪ್ಪ ಅವರಿಗೆ ಇಲ್ಲಿನ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಹಾಲಪ್ಪನವರಿಗೆ ಬಹು ದೊಡ್ಡ ರಿಲೀಫ್ ಸಿಕ್ಕಿದೆ. ಸುಮಾರು ೭ ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಬಿ. ಜಿ. ರಾಮಾ ಅವರು ತೀರ್ಪು ಪ್ರಕಟಿಸುತ್ತಿದ್ದಂತೆ ಕಟಕಟೆಯಲ್ಲಿ ನಿಂತಿದ್ದ ಹಾಲಪ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟರು.  ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಈ ತೀರ್ಪು ಹಾಲಪ್ಪಗೆ ರಾಜಕೀಯ ಪುನರ್ಜನ್ಮ ನೀಡಬಹುದೆಂದೇ ಹೇಳಲಾಗಿದೆ.

Facebook Comments

Sri Raghav

Admin